ನವದೆಹಲಿ : ಕೋವಿಡ್-19ನಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಹಲವು ಬದಲಾವಣೆಗಳಿಗೆ ಮುಂದಾಗಿದೆ. ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಆಟಗಾರರಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ್ರೆ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಿದೆ.
ಆಟಗಾರರಿಗೆ ಸೋಂಕು ಕಂಡು ಬಂದರೆ ಮ್ಯಾಚ್ ರೆಫ್ರಿ ಗಮನಕ್ಕೆ ತಂದು ಅವರಿಂದ ಅನುಮತಿ ಪಡೆದು ಬದಲಿ ಆಟಗಾರರನ್ನು ಕಣಕ್ಕಿಳಿಸಬಹುದು ಎಂದು ಐಸಿಸಿ ಹೇಳಿದೆ. ಚೆಂಡಿಗೆ ಎಂಜಲು ಬಳಕೆಯ ನಿಷೇಧ, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸ್ವದೇಶಿ ಅಂಪೈರ್‌ಗಳಿಗೆ ಅನುಮತಿ ಸೇರಿ ಕ್ರಿಕೆಟ್ ನಿಯಮಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ.
ಕ್ರಿಕೆಟ್ ಪಂದ್ಯದ ವೇಳೆ ಚೆಂಡಿನ ಹೊಳಪು ಕಾಪಾಡಿಕೊಳ್ಳಲು ಎಂಜಲು ಬಳಕೆಯ ನಿಷೇಧ ಸೇರಿ ಹಲವು ಸಲಹೆಗಳನ್ನು ಕನ್ನಡಿಗ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿಯ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿತ್ತು.