ಗಯಾನ: ಭಾರತದ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಮೊದಲ ಪಂದ್ಯವನ್ನು ಮಳೆಯ ಕಾರಣದಿಂದ 34 ಓವರ್ಗಳಿಗೆ ಇಳಿಸಲಾಗಿದೆ.
ಮಳೆಯ ಕಾರಣ ಒಂದೂವರೆ ಗಂಟೆ ತಡವಾಗಿ ಆರಂಭವಾಗಿದ್ದ ಪಂದ್ಯ ಮತ್ತೆ 5 ಓವರ್ ನಡೆದಿದ್ದ ವೇಳೆ ಆಟ ನಿಲ್ಲಿಸಿತ್ತು. ಇದೀಗ ಮತ್ತೆ ವಿಂಡೀಸ್ ಬ್ಯಾಟಿಂಗ್ ಮುಂದುವರಿಸಿದ್ದು, ಓವರ್ಗತಿಯನ್ನು 34ಕ್ಕೆ ಇಳಿಸಲಾಗಿದೆ. ಟಾರ್ಗೆಟ್ ಅನ್ನು ಡಿಎಲ್ಎಸ್ ನಿಯಮಕ್ಕನುಗುಣವಾಗಿ ನಿಗದಿಪಡಿಸಲಾಗುತ್ತದೆ.
ವಿಶ್ವಕಪ್ನಲ್ಲಿ ಗಾಯಗೊಂಡು ಹೊರಬಿದ್ದಿದ್ದ ಶಿಖರ್ ಧವನ್ ಏಕದಿನ ತಂಡಕ್ಕೆ ಮರಳಿದ್ದಾರೆ. ಯುವ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಏಕದಿನ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಭಾರತ ತಂಡ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯುತ್ತಿದ್ದು, ಕುಲದೀಪ್ ಜೊತೆ ಆಲ್ರೌಂಡರ್ ರವೀಂದ್ರ ಜಡೇಜಾ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಭಾರತ ತಂಡ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಶ್ರೇಯಸ್ ಐಯ್ಯರ್, ರಿಷಭ್ ಪಂತ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್
ವೆಸ್ಟ್ ಇಂಡೀಸ್
ಇವಿನ್ ಲೆವಿಸ್, ಕ್ರಿಸ್ ಗೇಲ್, ಶೈ ಹೋಪ್, ನಿಕೋಲಸ್ ಪೂರನ್,ಶ್ರಿಮ್ರೋನ್ ಹೆಟ್ಮೈರ್, ರೋಸ್ಟನ್ ಚೇಸ್, ಜಾಸನ್ ಹೋಲ್ಡರ್(ನಾಯಕ), ಕಾರ್ಲೋಸ್ ಬ್ರಾತ್ವೇಟ್, ಫ್ಯಾಬಿಯನ್ ಅಲೆನ್, ಶೆಲ್ಡಾನ್ ಕಾಟ್ರೆಲ್, ಕೆಮರ್ ರೋಚ್