ಮುಂಬೈ: ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಧೋನಿ ಸ್ಥಾನಕ್ಕೆ ಮೊದಲ ಆಯ್ಕೆಯಾಗಿರುವ ರಿಷಭ್ ಪಂತ್ ವಿಚಾರದಲ್ಲಿ ಕ್ರಿಕೆಟ್ ಆಡಳಿತ ಮಂಡಳಿ ರೂಪಿಸುತ್ತಿರುವ ಆಲೋಚನೆಗಳಲ್ಲಿ ಹಲವು ಲೋಪದೋಷಗಳಿವೆ ಎಂದು ಕೈಫ್ ಹೇಳುತ್ತಾರೆ.
ಧೋನಿ ಉತ್ತರಾಧಿಕಾರಿಯೆಂದೇ ಬಿಂಬಿತವಾಗಿದ್ದ ಪಂತ್ ತಮ್ಮ ವೃತ್ತಿ ಜೀವನದಲ್ಲಿ ಪಡೆದ ಉತ್ತಮ ಆರಂಭವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದರು. ಅದಕ್ಕೆ ಕಾರಣ ಅವರ ಬಗ್ಗೆ ಆಯ್ಕೆ ಸಮಿತಿ ಮಾಡುತ್ತಿರುವ ಆಲೋಚನೆಗಳಲ್ಲಿನ ಲೋಪದೋಷ. ಅವರಿಗೆ ಸರಿಯಾದ ಬ್ಯಾಟಿಂಗ್ ಕ್ರಮಾಂಕವನ್ನು ಸೂಚಿಸುವ ವಿಚಾರದಲ್ಲಿ ಗೊಂದಲ ಉಂಟಾಗುತ್ತಿದೆ ಎಂದು 39 ವರ್ಷದ ಮಾಜಿ ಆಟಗಾರ ವಿವರಿಸುತ್ತಾರೆ.
![Rishabh Pant](https://etvbharatimages.akamaized.net/etvbharat/prod-images/768-512-8021246-880-8021246-1594720173829_1407newsroom_1594721042_203.jpg)
ಪಂತ್ ಒಬ್ಬ ಸ್ಫೋಟಕ ಆಟಗಾರ. ನೀವು ಅವನಿಗೆ ಒಂದು ಕ್ರಮಾಂಕವನ್ನು ಸೆಟ್ ಮಾಡಿಕೊಟ್ಟರೆ, ಆತ ಆ ಜಾಗದಲ್ಲಿ ಆಡುತ್ತಾನೆ. ಮತ್ತು ಇದರಿಂದ ಆತನಿಗೆ ಹೆಚ್ಚು ಓವರ್ಗಳ ತನಕ ಆಡಲು ಆಗುತ್ತದೆ. ಆತ ಸ್ಫೋಟಕ ಬ್ಯಾಟ್ಸ್ಮನ್. ತಾನು ಎದುರಿಸುವ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಕ್ಕೆ ಮುಂದಾಗುತ್ತಾನೆ. ಆದ್ದರಿಂದ ಆತನಿಗೆ ನಿರ್ದಿಷ್ಠ ಕ್ರಮಾಂಕದ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.
ಐಪಿಎಲ್ನಲ್ಲಿ ನಾನು, ಪಾಂಟಿಂಗ್ ಹಾಗೂ ದಾದಾ ಸೇರಿ ಪಂತ್ ಅವರನ್ನು 3 ಅಥವಾ 4 ನೇ ಕ್ರಮಾಂಕದಲ್ಲಿ ಆಡಿಸಬೇಕು ಎಂಬುದರ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಆದರೆ ನಾವು ಬ್ಯಾಟಿಂಗ್ ಕ್ರಮಾಂಕ ಯಾವುದೇ ಆಗಲಿ, ಪಂತ್ಗೆ ಕೊನೇಯ 60 ಓವರ್ಗಳ ಆಟ ಸಿಗುವಂತೆ ನೋಡಿಕೊಂಡೆವು. ಕೊನೆಯ 10 ಓವರ್ಗಳಲ್ಲಿ ಆತ ಆಟದ ದಿಕ್ಕನ್ನೇ ಬದಲಿಸಬಲ್ಲ ಎಂದು ನಾವು ನಂಬಿದ್ದೇವೆ. ಇದೇ ರೀತಿ ಭಾರತ ತಂಡದಲ್ಲೂ ಪಂತ್ಗೆ ಒಂದು ನಿರ್ದಿಷ್ಟ ಕ್ರಮಾಂಕದ ಅವಶ್ಯಕತೆಯಿದೆ ಎಂದು ಕೈಫ್, ಆಕಾಶ್ ಚೋಪ್ರಾ ಜೊತೆಗಿನ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.