ETV Bharat / sports

ಸೈಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ ಕರ್ನಾಟಕ ಫೈನಲ್​ಗೆ: ಸೋಲಿಲ್ಲದ ಸರದಾರನಾಗಿ ಕಪ್​ ಗೆಲ್ಲುವ ಗುರಿ! - ಕರ್ನಾಟಕ ಫೈನಲ್

ರಣಜಿ ಚಾಂಪಿಯನ್ಸ್​ ತಂಡ ವಿದರ್ಭ ವಿರುದ್ಧ 6 ವಿಕೆಟ್​​ಗಳ ಗೆಲುವು ದಾಖಲು ಮಾಡುವ ಮೂಲಕ ಫೈನಲ್​ಗೆ ಲಗ್ಗೆ ಹಾಕಿದ್ದು, ಫೈನಲ್​​ನಲ್ಲಿ ಮಹಾರಾಷ್ಟ್ರ ವಿರುದ್ಧ ಸೆಣಸಾಟ ನಡೆಸಲಿದೆ.

ಮನೀಶ್​ ಪಾಂಡೆ ಬ್ಯಾಟಿಂಗ್​ ವೈಖರಿ
author img

By

Published : Mar 12, 2019, 9:30 PM IST

ಇಂದೋರ್​​: ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿ ಸೋಲಿಲ್ಲದ ಸರದಾರನಾಗಿರುವ ಕರ್ನಾಟಕ ತಂಡ ಇದೀಗ ಸೂಪರ್​ ಲೀಗ್​ ಹಂತದ ಕೊನೆ ಪಂದ್ಯದಲ್ಲೂ ಗೆಲುವು ದಾಖಲು ಮಾಡಿದೆ. ಇದರಿಂದ ಫೈನಲ್​ಗೆ​ ಲಗ್ಗೆ ಹಾಕಿದೆ.

ಇಂದು ರಣಜಿ ಚಾಂಪಿಯನ್ಸ್​ ತಂಡ ವಿದರ್ಭ ವಿರುದ್ಧ 6 ವಿಕೆಟ್​​ಗಳ ಗೆಲುವು ದಾಖಲು ಮಾಡುವ ಮೂಲಕ ಫೈನಲ್​ಗೆ ಲಗ್ಗೆ ಹಾಕಿದೆ. ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ವಿದರ್ಭ ತಂಡ 20 ಓವರ್​​ಗಳಲ್ಲಿ 7 ವಿಕೆಟ್​ ಕಳೆದುಕೊಂಡು ಕೇವಲ 138 ರನ್ ​ಗಳಿಕೆ ಮಾಡಿತ್ತು. ವಿಶೇಷವೆಂದರೆ ವಿದರ್ಭ ತಂಡದ ಪರ ಆರಂಭಿಕರಾಗಿ ವೇಗದ ಬೌಲರ್​ ಉಮೇಶ್​ ಯಾದವ್ ಬ್ಯಾಟ್​ ಬೀಸಿದರು. ಆದರೆ ಕೇವಲ 4 ರನ್​ ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು.

ಸುಲಭದ ಗುರಿ ಬೆನ್ನತ್ತಿದ್ದ ಕರ್ನಾಟಕ ತಂಡ ಆರಂಭದಲ್ಲೇ ಶರತ್​(5), ಅಗರವಾಲ್​(13) ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಈ ವೇಳೆ ಜೊತೆಯಾದ ರೋಹನ್​ ಕದಂ(39), ಕರುಣ್​ ನಾಯರ್​​(24) ತಂಡಕ್ಕೆ ಎಚ್ಚರಿಕೆ ಆರಂಭ ಒದಗಿಸಿದರು. 39 ರನ್ ​ಗಳಿಕೆ ಮಾಡಿ ರೋಹನ್​ ವಿಕೆಟ್​ ಒಪ್ಪಿಸುತ್ತಿದ್ದಂತೆ ಕಣಕ್ಕಿಳಿದ ನಾಯಕ ಮನೀಶ್​ ಪಾಂಡೆ ಕೇವಲ 35 ಎಸೆತಗಳಲ್ಲಿ 49 ರನ್​ ಸಿಡಿಸಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ ತಂಡ 19.2 ಓವರ್​​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 140 ರನ್​ ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ಜತೆಗೆ ಫೈನಲ್​ ಪ್ರವೇಶ ಪಡೆದುಕೊಂಡಿದೆ.

ಮತ್ತೊಂದು ಪಂದ್ಯದಲ್ಲಿ ರೈಲ್ವೇಸ್​ ವಿರುದ್ಧ ಮಹಾರಾಷ್ಟ್ರ ತಂಡ 21 ರನ್​ಗಳ ಗೆಲುವು ದಾಖಲು ಮಾಡಿದ್ದರಿಂದ ಕರ್ನಾಟಕ-ಮಹಾರಾಷ್ಟ್ರ ತಂಡ ಹೋಳ್ಕರ್‌ ಕ್ರೀಡಾಂಗಣದಲ್ಲಿ ಫೈನಲ್​​ನಲ್ಲಿ ಮಾರ್ಚ್​ 14ರಂದು ಫೈಟ್​ ನಡೆಸಲಿವೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.