ETV Bharat / sports

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಜಮ್ಮು ಕಾಶ್ಮೀರ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ - ಪವನ್ ದೇಶಪಾಂಡೆ

ಬೆಂಗಳೂರಿನ ಅಲೂರು ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕರುಣ್ ನಾಯರ್​ ಬಳಗ ಆಲ್​ರೌಂಡ್​ ಪ್ರದರ್ಶನ ತೋರಿ ಗೆಲುವಿನೊಂದಿಗೆ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಿದೆ.

ಸಯ್ಯದ್ ಮುಷ್ತಾಕ್ ಅಲಿ 2021
ಕರ್ನಾಟಕ ತಂಡಕ್ಕೆ ಜಯ
author img

By

Published : Jan 10, 2021, 6:19 PM IST

ಬೆಂಗಳೂರು: ಹಾಲಿ ಚಾಂಪಿಯನ್ ಕರ್ನಾಟಕ ತಂಡ ತನ್ನ ಮೊದಲ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡವನ್ನು 43 ರನ್​ಗಳಿಂದ ಮಣಿಸಿ ಶುಭಾರಂಭ ಮಾಡಿದೆ.

ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಕರ್ನಾಟಕ ತಂಡ ಆರಂಭಿಕ ಆಘಾತದ ನಡುವೆಯೂ ಕೆಎಲ್​ ಶ್ರೀಜಿತ್ ಅವರ 48 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 150 ರನ್​ಗಳಿಸಿತ್ತು. ಅನುವೃದ್ಧ ಜೋಶಿ 29 ಮತ್ತು ನಾಯಕ ಕರುಣ್ ನಾಯರ್​ 27 ರನ್​ಗಳಿಸಿದ್ದರು. ಐಪಿಎಲ್​ನ ಭರವಸೆಯ ಆಟಗಾರ ದೇವದತ್​ ಪಡಿಕ್ಕಲ್​ ಕೇವಲ 18 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

  • Jammu and Kashmir are all-out for 107 in 18.4 overs.

    Karnataka win by 43 runs.

    KL Shrijith 48*(31),
    Jagadeesha Suchith, Abhimanyu Mithun, Krishnappa Gowtham 2W each. Ronit More 1W. Prasidh Krishna 3W.

    Great start for Karnataka in the title defense. #KARvJK #SMAT

    — Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) January 10, 2021 " class="align-text-top noRightClick twitterSection" data=" ">

ಜಮ್ಮು ಕಾಶ್ಮೀರ ಪರ ನಾಯಕ ಪರ್ವೇಜ್ ರಸೂಲ್ ಮತ್ತು ಆಕಿಬ್ ನಬಿ ತಲಾ 2 ವಿಕೆಟ್ ಪಡೆದರೆ, ಅಬೀದ್ ಮುಷ್ತಾಕ್ ಒಂದು ವಿಕೆಟ್​ ಪಡೆದಿದ್ದರು.

151 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಜಮ್ಮು ಕಾಶ್ಮೀರ ತಂಡ ಕರ್ನಾಟಕದ ಬೌಲಿಂಗ್ ದಾಳಿಗೆ ನಲುಗಿ ಕೇವಲ 107 ರನ್​ಗಳಿಗೆ ಸರ್ವಪತನ ಹೊಂದಿತು. 30 ರನ್​ ಗಳಿಸಿದ ಐಪಿಎಲ್ ಸ್ಟಾರ್​ ಅಬ್ದುಲ್ ಸಮದ್​ 30 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಕರ್ನಾಟಕ ಪರ ಅಭಿಮನ್ಯು ಮಿಥುನ್ 24ಕ್ಕೆ 2, ಎಂ.ಪ್ರಸಿದ್ಧ್ 34ಕ್ಕೆ 3, ಜೆ.ಸುಚೀತ್​ 17ಕ್ಕೆ 2 ಹಾಗೂ ಕೆ. ಗೌತಮ್​ 13ಕ್ಕೆ 2 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.