ETV Bharat / sports

ಸೈಯದ್ ಮುಷ್ತಾಕ್ ಅಲಿ ಟೂರ್ನಿ.. ಪ್ರಶಸ್ತಿಗಾಗಿ ದಕ್ಷಿಣದ 2 ಬಲಿಷ್ಠ ತಂಡದ ನಡುವೆ ಹಣಾಹಣಿ.. - ಫೈನಲ್​ನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಮುಖಾಮುಖಿ

ಇಂದು ನಡೆಯುವ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್​​ ಕರ್ನಾಟಕ ಹಾಗೂ ತಮಿಳುನಾಡು ಪ್ರಶಸ್ತಿಗಾಗಿ ಸೆಣಸಾಡಲಿವೆ.

Syed Mushtaq Ali
ಸೈಯದ್ ಮುಷ್ತಾಕ್ ಅಲಿ ಟೂರ್ನಿ
author img

By

Published : Dec 1, 2019, 8:12 AM IST

ಸೂರತ್​: ಅತ್ಯಂತ ರೋಚಕವಾಗಿ ಸಾಗಿದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಉಪಾಂತ್ಯ ಇಂದು ನಡೆಯಲಿದೆ. ಹಾಲಿ ಚಾಂಪಿಯನ್​​ ಕರ್ನಾಟಕ ಹಾಗೂ ದಕ್ಷಿಣದ ಮತ್ತೊಂದು ಬಲಿಷ್ಠ ತಂಡ ತಮಿಳುನಾಡು ಮುಖಾಮುಖಿಯಾಗಲಿವೆ.

ಕೆಲ ತಿಂಗಳ ಹಿಂದೆ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್​​ನಲ್ಲೂ ಇದೇ ತಂಡಗಳು ಎದುರಾಗಲಿವೆ. ಈ ವೇಳೆ ಕರ್ನಾಟಕ ತಂಡ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಆದರೆ, ಈ ಸೇಡನ್ನು ತೀರಿಸಲು ತಮಿಳುನಾಡು ತಂಡಕ್ಕೆ ಅವಕಾಶ ದೊರೆತಿದ್ದು ಪಂದ್ಯದ ಕುತೂಹಲ ಹೆಚ್ಚಿಸಿದೆ.

ಕರ್ನಾಟಕ ತಂಡದ ಬ್ಯಾಟಿಂಗ್ ಅತ್ಯಂತ ಬಲಿಷ್ಠವಾಗಿದೆ. ಮೊದಲ ಬ್ಯಾಟಿಂಗ್ ಇಲ್ಲವೇ ಚೇಸಿಂಗ್​​ನಲ್ಲಿ ಮನೀಷ್ ಪಾಂಡೆ ತಂಡಕ್ಕೆ ತಮಿಳುನಾಡು ದಿಟ್ಟ ಹೋರಾಟ ನೀಡುವುದು ಅಸಾಧ್ಯ. ಆದರೆ, ತಮಿಳುನಾಡು ಬೌಲಿಂಗ್​ ವಿಭಾಗದಲ್ಲಿ ಉತ್ತಮವಾಗಿದೆ. ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರೆ ಗೆಲುವು ಸಾಧ್ಯ.

ಇವರೇ ಕರ್ನಾಟಕದ ಶಕ್ತಿ: ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ ಹಾಗೂ ಕೆ ಎಲ್​​ ರಾಹುಲ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಸೆಮೀಸ್​ನಲ್ಲೂ ಈ ಇಬ್ಬರು ಆಟಗಾರರು ಅಬ್ಬರಿಸಿದ್ದಾರೆ. 190ಕ್ಕೂ ಅಧಿಕ ರನ್‌ ಗುರಿಯನ್ನು ಆರಂಭಿಕರ ಸಹಾಯದಿಂದ 15 ಓವರ್‌ನೊಳಗೆ ಗೆದ್ದು ಬೀಗಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ್ದ ದೇವದತ್ ಪಡಿಕ್ಕಲ್(11 ಪಂದ್ಯದಿಂದ 548 ರನ್)​, ಸದ್ಯ ಈ ಟೂರ್ನಿಯಲ್ಲೂ ಮುಂಚೂಣಿಯಲ್ಲಿದ್ದಾರೆ. ಇವರ ಜೊತೆಗೆ ನಾಯಕ ಮನೀಷ್ ಪಾಂಡೆ, ಮಯಾಂಕ್ ಅಗರ್ವಾಲ್​​ ಉತ್ತಮವಾಗಿ ಬ್ಯಾಟ್ ಬೀಸಬಲ್ಲರು.

ತಮಿಳುನಾಡು ಹೇಗಿದೆ?: ಸೂಪರ್​ ಲೀಗ್​ನಲ್ಲಿ ಕರ್ನಾಟಕದ ವಿರುದ್ಧ ಸೋತಿದ್ದ ತಮಿಳುನಾಡು ಫೈನಲ್​ನಲ್ಲಿ ಇದೇ ಸೇಡು ತೀರಿಸಲು ಮುಂದಾಗಿದೆ. ಸಾಯಿ ಕಿಶೋರ್​​​(20 ವಿಕೆಟ್), ಎಂ.ಸಿದ್ಧಾರ್ಥ್​, ಮುರುಗನ್ ಅಶ್ವಿನ್ ಬೌಲಿಂಗ್​ನಲ್ಲಿ ಮಿಂಚು ಹರಿಸಿದ್ದಾರೆ. ಜೊತೆಯಲ್ಲಿ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ಸಹ ವಿಕೆಟ್ ಕೀಳುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್​ನಲ್ಲಿ ನಾಯಕ ದಿನೇಶ್ ಕಾರ್ತಿಕ್​​, ಶಾರುಖ್ ಖಾನ್, ವಿಜಯ್ ಶಂಕರ್​​ ಬಲ ತುಂಬಲಿದ್ದಾರೆ.

Intro:Body:

ಸೂರತ್​: ಅತ್ಯಂತ ರೋಚಕವಾಗಿ ಸಾಗಿದ ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಉಪಾಂತ್ಯ ಇಂದು ನಡೆಯಲಿದ್ದು, ಹಾಲಿ ಚಾಂಪಿಯನ್​​ ಕರ್ನಾಟಕ ಹಾಗೂ ದಕ್ಷಿಣದ ಮತ್ತೊಂದು ಬಲಿಷ್ಠ ತಂಡ ತಮಿಳುನಾಡು ಮುಖಾಮುಖಿಯಾಗಲಿದೆ.

ಕೆಲ ತಿಂಗಳ ಹಿಂದೆ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್​​ನಲ್ಲೂ ಇದೇ ತಂಡಗಳು ಎದುರಾಗಿದ್ದು, ಈ ವೇಳೆ ಕರ್ನಾಟಕ ತಂಡ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಆದರೆ ಈ ಸೇಡನ್ನು ತೀರಿಸಲು ತಮಿಳುನಾಡು ತಂಡಕ್ಕೆ ಅವಕಾಶ ದೊರೆತಿದ್ದು ಪಂದ್ಯದ ಕುತೂಹಲವನ್ನು ಹೆಚ್ಚಿಸಿದೆ.

ಕರ್ನಾಟಕ ತಂಡ ಬ್ಯಾಟಿಂಗ್ ಅತ್ಯಂತ ಬಲಿಷ್ಠವಾಗಿದ್ದು, ಮೊದಲ ಬ್ಯಾಟಿಂಗ್ ಇಲ್ಲವೇ ಚೇಸಿಂಗ್​​ನಲ್ಲಿ ಮನೀಷ್ ಪಾಂಡೆ ತಂಡಕ್ಕೆ ತ.ನಾಡು ದಿಟ್ಟ ಹೋರಾಟ ನೀಡುವುದು ಅಸಾಧ್ಯ. ಆದರೆ ತಮಿಳುನಾಡು ಬೌಲಿಂಗ್​​ನಲ್ಲಿ ವಿಭಾಗದಲ್ಲಿ ಉತ್ತಮವಾಗಿದ್ದು, ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರೆ ಗೆಲುವು ಸಾಧ್ಯ.

ಇವರೇ ಕರ್ನಾಟಕದ ಶಕ್ತಿ:

ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ ಹಾಗೂ ಕೆ.ಎಲ್​​ ರಾಹುಲ್ ಅದ್ಭುತ ಫಾರ್ಮ್​ನಲ್ಲಿದ್ದು, ಸೆಮೀಸ್​ನಲ್ಲೂ ಈ ಇಬ್ಬರೂ ಆಟಗಾರರು ಅಬ್ಬರಿಸಿದ್ದಾರೆ. 190ಕ್ಕೂ ಅಧಿಕ ಗುರಿಯನ್ನು ಆರಂಭಿಕರ ಸಹಾಯದಿಂದ 15 ಓವರ್​ ಒಳಗೆ ಗೆದ್ದು ಬೀಗಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ್ದ ದೇವದತ್ ಪಡಿಕ್ಕಲ್(11 ಪಂದ್ಯದಿಂದ 548 ರನ್)​, ಸದ್ಯ ಈ ಟೂರ್ನಿಯಲ್ಲೂ ಮುಂಚೂಣಿಯಲ್ಲಿದ್ದಾರೆ. ಇವರ ಜೊತೆಗೆ ನಾಯಕ ಮನೀಷ್ ಪಾಂಡೆ, ಮಯಾಂಕ್ ಅಗರ್ವಾಲ್​​ ಉತ್ತಮವಾಗಿ ಬ್ಯಾಟ್ ಬೀಸಬಲ್ಲರು.

ತಮಿಳುನಾಡು ಹೇಗಿದೆ..?

ಸೂಪರ್​ ಲೀಗ್​ನಲ್ಲಿ ಇದೇ ಕರ್ನಾಟಕದ ವಿರುದ್ಧ ಸೋತಿದ್ದ ತ.ನಾಡು ಫೈನಲ್​ನಲ್ಲಿ ಇದೇ ಸೇಡು ತೀರಿಸಲು ಮುಂದಾಗಿದೆ. ಸಾಯಿ ಕಿಶೋರ್​​​(20 ವಿಕೆಟ್), ಎಂ.ಸಿದ್ಧಾರ್ಥ್​, ಮುರುಗನ್ ಅಶ್ವಿನ್ ಬೌಲಿಂಗ್​ನಲ್ಲಿ ಮಿಂಚು ಹರಿಸಿದ್ದಾರೆ. ಜೊತೆಯಲ್ಲಿ ಆಲ್​ರೌಂಡರ್​ ವಾಷಿಂಗ್ಟನ್ ಸುಂದರ್ ಸಹ ವಿಕೆಟ್ ಕೀಳುವ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್​ನಲ್ಲಿ ನಾಯಕ ದಿನೇಶ್ ಕಾರ್ತಿಕ್​​, ಶಾರುಖ್ ಖಾನ್, ವಿಜಯ್ ಶಂಕರ್​​ ಬಲ ತುಂಬಲಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.