ETV Bharat / sports

ಸಿಡ್ನಿಯಲ್ಲಿ ಹೆಚ್ಚುತ್ತಿರುವ ಕೊರೊನಾ: ಮೂರನೇ ಟೆಸ್ಟ್ ಪಂದ್ಯಕ್ಕೆ ಎದುರಾದ ಆತಂಕ - ಭಾರತ vs ಆಸ್ಟ್ರೇಲಿಯಾ ಮೂರನೇ ಟೆಸ್ಟ್

ಕಳೆದ ಎರಡು ವಾರಗಳಲ್ಲಿ 170 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದರೂ, ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದ್ದು, ಎಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟಪಡಿಸಲಾಗಿಲ್ಲ.

Sydney Test under threat as areas near SCG put on alert
ಮೂರನೇ ಟೆಸ್ಟ್ ಪಂದ್ಯಕ್ಕೆ ಎದುರಾದ ಆತಂಕ
author img

By

Published : Jan 2, 2021, 7:09 AM IST

ಸಿಡ್ನಿ(ಆಸ್ಟ್ರೇಲಿಯಾ): ಸಿಡ್ನಿ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಎಸ್‌ಸಿಜಿಯಲ್ಲಿ ಜನವರಿ 7 ರಿಂದ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಆತಂಕ ಎದುರಾಗಿದೆ.

ಡಿಸೆಂಬರ್ 31 ರಂದು ಸಿಡ್ನಿಯ ಸುತ್ತಮುತ್ತಲ ಪ್ರದೇಶದಲ್ಲಿ ಹೊಸದಾಗಿ 10 ಪ್ರಕರಣಗಳು ಕಾಣಿಸಿಕೊಂಡಿದ್ದು, ಕಳೆದ ಎರಡು ವಾರಗಳಲ್ಲಿ 170 ಕೇಸ್ ಪತ್ತೆಯಾಗಿವೆ. ಹೀಗಾಗಿ ಕ್ರೀಡಾಂಗಣದೊಳಗೆ ಪ್ರೇಕ್ಷರಿಲ್ಲದೇ ಮೂರನೇ ಟೆಸ್ಟ್ ನಡೆಸಲಾಗುತ್ತದೆ ಎಂದು ವರದಿಗಳು ಹೇಳುತ್ತಿವೆ.

ಎಸ್‌ಸಿಜಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲಿರುವ ಬೆರಾಲಾ ಮತ್ತು ಸ್ಮಿತ್‌ಫೀಲ್ಡ್ ಪ್ರದೇಶಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. "ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಕರೆಗಳು ಬಂದಿವೆ ಮತ್ತು ಸಹಜವಾಗಿ ಮೂರನೇ ಟೆಸ್ಟ್ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಪ್ರೇಕ್ಷಕರ ಆಗಮನವನ್ನು ತಡೆಹಿಯಲಾಗುತ್ತದೆ ಎನ್ನಲಾಗಿದೆ. ಈ ಬಗ್ಗೆ ನ್ಯೂ ಸೌತ್ ವೇಲ್ಸ್ ಪ್ರಧಾನಮಂತ್ರಿ ಅವರ ಬಳಿ ಮಾಹಿತಿ ಪಡೆಯಲಾಗುತ್ತದೆ. 2020ರ ಕೊನೆಯ ದಿನಕ್ಕೆ 10 ಪ್ರಕರಣಗಳು ಪತ್ತೆಯಾಗಿದ್ದು, ಈ ಸಂಖ್ಯೆ ನಿಜಕ್ಕೂ ಗಮನಾರ್ಹವಾಗಿದೆ"ಎಂದು ವರದಿಯಲ್ಲಿ ಹೇಳಲಾಗಿದೆ.

ಕಳೆದ ಎರಡು ವಾರಗಳಲ್ಲಿ 170 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದರೂ, ಸಿಡ್ನಿಯಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದ್ದು, ಎಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟಪಡಿಸಲಾಗಿಲ್ಲ.

ಕೋವಿಡ್ ಕಾರಣದಿಂದಾಗಿ ದ್ವೀತೀಯ ಟೆಸ್ಟ್ ಪಂದ್ಯದ ನಂತರ ಟೀಂ ಇಂಡಿಯಾ ಮತ್ತು ಆಸೀಸ್ ಆಟಗಾರರು ಇನ್ನೂ ಕೂಡ ಸಿಡ್ನಿಗೆ ಆಗಮಿಸಿಲ್ಲ. ಪಂದ್ಯಕ್ಕೆ ಮೂರು ದಿನ ಮುಂಚಿತವಾಗಿ ಕ್ರಿಕೆಟಿಗರು ಸಿಡ್ನಿ ತಲುಪಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿತ್ತು.

4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಜ.7 ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಪಂದ್ಯ ಆರಂಭವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.