ETV Bharat / sports

ದೇಶದ ಜನ, ಪ್ರಧಾನಿಯಿಂದ ಪ್ರೀತಿಸಲ್ಪಡುವುದಕ್ಕಿಂತ ಉತ್ತಮ ಮೆಚ್ಚುಗೆಯಿಲ್ಲ: ರೈನಾ

author img

By

Published : Aug 21, 2020, 3:41 PM IST

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಸುರೇಶ್ ರೈನಾ ಆಗಸ್ಟ್​ 15ರಂದು ಮಹೇಂದ್ರ ಸಿಂಗ್​​ ಧೋನಿ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿದ್ದರು.

Suresh raina
Suresh raina

ನವದೆಹಲಿ: ಆಗಸ್ಟ್​ 15ರಂದು ಮಹೇಂದ್ರ ಸಿಂಗ್​ ಧೋನಿ ಜತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಸುರೇಶ್​ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರ ಸಾಧನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಎರಡು ಪುಟಗಳ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ನಿಮ್ಮ ಆ ಇನ್ನಿಂಗ್ಸ್ ನನಗೆ ಇನ್ನೂ ನೆನಪಿದೆ: ಸುರೇಶ್ ರೈನಾಗೆ ಪ್ರಧಾನಿ ಮೋದಿ ಪತ್ರ

ಪ್ರಧಾನಿ ಪತ್ರಕ್ಕೆ ಸಂತಸ ವ್ಯಕ್ತಪಡಿಸಿರುವ ರೈನಾ, ದೇಶಕ್ಕಾಗಿ ನಾವು ಆಡುವಾಗ ನಮ್ಮ ರಕ್ತ ಮತ್ತು ಬೆವರನ್ನು ಹರಿಸುತ್ತೇವೆ. ಈ ದೇಶದ ಜನರಿಂದ ಮತ್ತು ದೇಶದ ಪ್ರಧಾನ ಮಂತ್ರಿಯಿಂದ ಪ್ರೀತಿಸಲ್ಪಡುವುದಕ್ಕಿಂತ ಉತ್ತಮವಾದ ಮೆಚ್ಚುಗೆಯಿಲ್ಲ. ನಿಮ್ಮ ಮೆಚ್ಚುಗೆ ಮತ್ತು ಶುಭಾಶಯಗಳಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

  • When we play, we give our blood & sweat for the nation. No better appreciation than being loved by the people of this country and even more by the country’s PM. Thank you @narendramodi ji for your words of appreciation & best wishes. I accept them with gratitude. Jai Hind!🇮🇳 pic.twitter.com/l0DIeQSFh5

    — Suresh Raina🇮🇳 (@ImRaina) August 21, 2020 " class="align-text-top noRightClick twitterSection" data=" ">

2011ರ ವಿಶ್ವಕಪ್​ ಕ್ವಾರ್ಟರ್ ​ಫೈನಲ್​ನಲ್ಲಿ ರೈನಾ ಅದ್ಭುತ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಈ ವಿಷಯವೂ ಸೇರಿದಂತೆ ಅನೇಕ ಮಾಹಿತಿಗಳನ್ನು ಪತ್ರದಲ್ಲಿ ಪ್ರಧಾನಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಭಾವನಾತ್ಮಕ ಪತ್ರ ಬರೆದ ಮೋದಿಗೆ ಧೋನಿ ಧನ್ಯವಾದ

ರೈನಾ ಹಾಗೂ ಧೋನಿ ಸದ್ಯ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಭಾಗವಾಗಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಪಾಲ್ಗೊಂಡಿದ್ದಾರೆ. ಇಬ್ಬರೂ ಆಟಗಾರರು ತಂಡದೊಂದಿಗೆ ಇಂದು ದುಬೈಗೆ ಪ್ರಯಾಣ ಬೆಳೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.