ETV Bharat / sports

ಸ್ನೇಹಿತರ ದಿನದ ಸಂಭ್ರಮ.. ಎಂಎಸ್​ ಧೋನಿ ನನ್ನ 'ಮಾರ್ಗದರ್ಶಕ' ಎಂದ ರೈನಾ!!

author img

By

Published : Aug 2, 2020, 3:28 PM IST

ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ರೈನಾ, 'ಸುಂದರವಾದ ನೆನಪುಗಳನ್ನು ಸೃಷ್ಠಿಸಿರುವುದಕ್ಕೆ ಚೆನ್ನೈಸೂಪರ್​ ಕಿಂಗ್ಸ್​ಗೆ ಧನ್ಯವಾದಳು. ಎಂಎಸ್​ ಧೋನಿ ನನಗೆ ಸ್ನೇಹಿತ ಮಾತ್ರವಲ್ಲ, ನನ್ನ ಮಾರ್ಗದರ್ಶಕ ಮತ್ತು ಕಠಿಣ ಸಮಯದಲ್ಲಿ ಯಾವಾಗಲೂ ನನ್ನ ಜೊತೆಯಲ್ಲಿದ್ದರು..

ಸ್ನೇಹಿತರ ದಿನ
ಸ್ನೇಹಿತರ ದಿನ

ಮುಂಬೈ : ಭಾರತ ತಂಡದ ಹಿರಿಯ ಆಲ್​ರೌಂಡರ್​ ಸುರೇಶ್​ ರೈನಾ ಸ್ನೇಹಿತರ ದಿನದಂದು ತಮ್ಮ ನೆಚ್ಚಿನ ಸ್ನೇಹಿತ ಧೋನಿಗೆ ಶುಭಕೋರಿದ್ದು, ಧೊನಿಯನ್ನು ಸ್ನೇಹಿತ ಮಾತ್ರವಲ್ಲ ತಮ್ಮ ಮಾರ್ಗದರ್ಶಕ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್​ಕಿಂಗ್ಸ್​ ತನ್ನ ಅಧಿಕೃತ ಟ್ವಿಟರ್​ನಲ್ಲಿ ಸ್ನೇಹಿತರ ದಿನದಂದು ರೈನಾ ಮತ್ತು ಧೋನಿ ಒಟ್ಟಿಗೆಯಿರುವ ವಿಡಿಯೋ ತುಣುಕುಗಳನ್ನು ಶೇರ್ ಮಾಡಿಕೊಂಡಿತ್ತು.

ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ರೈನಾ, 'ಸುಂದರವಾದ ನೆನಪುಗಳನ್ನು ಸೃಷ್ಠಿಸಿರುವುದಕ್ಕೆ ಚೆನ್ನೈಸೂಪರ್​ ಕಿಂಗ್ಸ್​ಗೆ ಧನ್ಯವಾದಳು. ಎಂಎಸ್​ ಧೋನಿ ನನಗೆ ಸ್ನೇಹಿತ ಮಾತ್ರವಲ್ಲ, ನನ್ನ ಮಾರ್ಗದರ್ಶಕ ಮತ್ತು ಕಠಿಣ ಸಮಯದಲ್ಲಿ ಯಾವಾಗಲೂ ನನ್ನ ಜೊತೆಯಲ್ಲಿದ್ದರು. ಧನ್ಯವಾದಗಳು ಮಹಿ ಬಾಯ್​, ಆದಷ್ಟು ಬೇಗ ಸಿಗೋಣ, ಸ್ನೇಹಿತರ ದಿನಚಾರಣೆಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.

  • Friendships are like floodlights on a cricket field. They enjoy your success from the corner. But if they realise the sun’s going down on you, they light themselves up to provide brightness around you.
    For me, everyday is #FriendshipDay. pic.twitter.com/i80PIT6Knu

    — Sachin Tendulkar (@sachin_rt) August 2, 2020 " class="align-text-top noRightClick twitterSection" data=" ">

ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಕೂಡ ಸ್ನೇಹಿತರ ದಿನದ ಶುಭಾಶಯ ಕೋರಿದ್ದು, 'ಗೆಳತನವೆಂಬುದು ಕ್ರಿಕೆಟ್​ ಮೈದಾನದಲ್ಲಿರುವ ಫ್ಲಡ್​ ಲೈಡ್​ಗಳ ಹಾಗೆ. ಅವರು ನಿಮ್ಮ ಯಶಸ್ಸನ್ನು ಯಾವುದೋ ಮೂಲೆಯಲ್ಲಿ ನಿಂತು ಆನಂದಿಸುತ್ತಾರೆ. ಆದರೆ, ಸೂರ್ಯ ನಿಮ್ಮನ್ನು ಬಿಟ್ಟು ಹೋಗುತ್ತಿದ್ದಾನೆ ಎಂದೆನಿಸಿದಾಗ, ಅವರು ತಾವಾಗಿಯೇ ಬೆಳಗುವ ಮೂಲಕ ನಿಮ್ಮ ಸುತ್ತಲು ಹೊಳಪನ್ನು ಒದಗಿಸುತ್ತಾರೆ' ಎಂದು ಬರೆದು ತಮ್ಮ ಬಾಲ್ಯ ಸ್ನೇಹಿತರ ಜೊತೆಗಿನ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.