ETV Bharat / sports

ಸುನಿಲ್ ನೈನ್​ರನ್ನು ವಿಶ್ವದ ಶ್ರೇಷ್ಠ ಬೌಲರ್​​ ಎಂದ ಆಸೀಸ್​ ಮಾಜಿ ಕ್ರಿಕೆಟಿಗ

ಸುನಿಲ್​ ನೈರನ್​ 2012ರಿಂದಲೂ ಕೆಕೆಆರ್​ ತಂಡದಲ್ಲಿ ಇದ್ದಾರೆ. ಅವರು 2012 ಮತ್ತು 2014 ರಲ್ಲಿ ಚಾಂಪಿಯನ್ ಆದ ತಂಡದಲ್ಲಿ ಒಂದು ಪ್ರಮುಖ ಅಸ್ತ್ರವಾಗಿ ಕಾರ್ಯ ನಿರ್ವಹಿಸಿದ್ದರು. ಕೆಕೆಆರ್​ ಸೆಪ್ಟೆಂಬರ್​ 23 ರಂದು ಮುಂಬೈ ಇಂಡಿಯನ್ಸ್​ ವಿರುದ್ಧ ತನ್ನ ಅಭಿಯಾನ ಶುರುಮಾಡಲಿದೆ.

ಸುನಿಲ್ ನರೈನ್​
ಸುನಿಲ್ ನರೈನ್​
author img

By

Published : Sep 12, 2020, 10:58 PM IST

ನವದೆಹಲಿ: ವೆಸ್ಟ್​ ಇಂಡೀಸ್​ ತಂಡದ ಆಲ್​ರೌಂಡರ್​ ಸುನಿಲ್ ನರೈನ್​ ವಿಶ್ವದ ಅತ್ಯುತ್ತಮ ಟಿ20 ಬೌಲರ್​ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕೆಕೆಆರ್ ಮೆಂಟರ್​ ಡೇವಿಡ್ ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ.

ನರೈನ್​ ವಾದಯೋಗ್ಯವಾಗಿ ಪ್ರಸ್ತುತ ಟಿ20 ಕ್ರಿಕೆಟ್​ನ ಅತ್ಯುತ್ತಮ ಬೌಲರ್ ಆಗಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಾದರೂ ಅವರು ಉತ್ತಮ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅದೃಷ್ಟವಶಾತ್, ಅವರು ಕೋಲ್ಕತ್ತಾ ತಂಡದಲ್ಲಿದ್ದಾರೆ. ಅವರ ವಿರುದ್ಧ ಆಡುವುದು ಮತ್ತು ಅವರನ್ನು ನಿಯಂತ್ರಿಸುವುದು ತುಂಬಾ ಕಷ್ಟ ಎಂದು ಹಸ್ಸಿ ತಿಳಿಸಿದ್ದಾರೆ.

ನರೈನ್​ ಕೆಕೆಆರ್​ ಪರ ಹೆಚ್ಚು ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ. ಅವರು 110 ಪಂದ್ಯಗಳಿಂದ 122 ವಿಕೆಟ್​ಗಳನ್ನು ಪಡೆದಿದ್ದಾರೆ. 2012ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ಈ ಮಿಸ್ಟರಿ ಸ್ಪಿನ್ನರ್​ ಕಳೆದ ಎರಡು ಆವೃತ್ತಿಗಳಿಂದ ತಂಡಕ್ಕೆ ಆಲ್ರೌಂಡರ್​ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆರಂಭಿಕನಾಗಿಯೂ ಕಣಕ್ಕಿಳಿದು ಕೆಲವು ಪಂದ್ಯಗಳ ಗೆಲುವಿಗೆ ಕಾರಣರಾಗಿದ್ದಾರೆ. ಆದರೆ ಹಸ್ಸಿ ನರೈನ್​ರನ್ನು ಒಬ್ಬಬೌಲಿಂಗ್​ ಶಕ್ತಿಯಾಗಿ ನೋಡಲು ಇಷ್ಟಪಡುವುದಾಗಿ ಹೇಳಿದ್ದಾರೆ.

ಸುನಿಲ್ ನರೈನ್​ ಎದುರಾಳಿ ತಂಡ ಯಾವ ಸಂದರ್ಭದಲ್ಲಿ ಬೃಹತ್​ ಮೊತ್ತ ಕಲೆಯಾಕಲು ಶುರು ಮಾಡಿದಾಗಲೆಲ್ಲಾ ನಾಯಕ ಡಿಕೆ ಚೆಂಡನ್ನು ನೀಡಬಹುದಾದ ಒಬ್ಬ ಬೌಲರ್. ನರೈನ್​ ನಮಗೆ ಖಂಡಿತ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಡಲಿದ್ದಾರೆ ಎಂದು ಹಸ್ಸಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.