ಮುಂಬೈ: ಭಾರತ ತಂಡದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಮ್ಮ ಮಗನಿಗೆ ರೋಹನ್ ಎಂದು ಹೆಸರಿಡಲು ಕಾರಣವಾದ ವ್ಯಕ್ತಿ ಯಾರೆಂದು ಬಹಿರಂಗಪಡಿಸಿದ್ದಾರೆ. ತಮ್ಮ ಮಗನಿಗೆ ರೋಹನ್ ಆ ಹೆಸರಿಡಲು ಕಾರಣ ವಿಂಡೀಸ್ ತಂಡದ ಮಾಜಿ ಕ್ರಿಕೆಟಿಗ ರೋಹನ್ ಕನ್ಹೈ ಎಂದು ಸಂದರ್ಶನವೊಂದರಲ್ಲಿ ಸುನಿಲ್ ಗವಾಸ್ಕರ್ ಹೇಳಿಕೊಂಡಿದ್ದಾರೆ.
-
When Rohan met Rohan :) pic.twitter.com/cbYfpdydQA
— Rohan Gavaskar (@rohangava9) May 20, 2020 " class="align-text-top noRightClick twitterSection" data="
">When Rohan met Rohan :) pic.twitter.com/cbYfpdydQA
— Rohan Gavaskar (@rohangava9) May 20, 2020When Rohan met Rohan :) pic.twitter.com/cbYfpdydQA
— Rohan Gavaskar (@rohangava9) May 20, 2020
ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಸಂದರ್ಭದಲ್ಲಿ ರೋಹನ್ ಕನ್ಹೈ ಸುನಿಲ್ ಗವಾಸ್ಕರ್ಗೆ ಬ್ಯಾಟಿಂಗ್ ಟಿಪ್ಸ್ ಹೇಳಿಕೊಡುತ್ತಿದ್ದರಂತೆ. ಒಬ್ಬ ಜೂನಿಯರ್ ಆಟಗಾರನಿಗೆ ಅದೇ ತಂಡದ ಒಬ್ಬ ಆಟಗಾರ ಸಲಹೆ ನೀಡುವುದು ಸರ್ವೇ ಸಾಮಾನ್ಯ. ಆದರೆ, ಎದುರಾಳಿ ಆಟಗಾರನನ್ನು ಹುರಿದುಂಬಿಸುವ ರೋಹನ್ ಗುಣವನ್ನು ಲಿಟ್ಲ್ ಮಾಸ್ಟರ್ ಕೊಂಡಾಡಿದ್ದಾರೆ.
1971ರಲ್ಲಿ ಗವಾಸ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ತಪ್ಪಾಗಿ ಶಾಟ್ ಮಾಡಲು ಪ್ರಯತ್ನಿಸಿದ್ರೆ, ಅಲ್ಲೇ ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹನ್ ಗವಾಸ್ಕರ್ ಬಳಿ ಬಂದು ಆಟದ ಕಡೆ ಗಮನಕೊಟ್ಟು ಆಡು, ಏನಾಗಿದೆ ನಿನಗೆ, ಶತಕ ಸಿಡಿಸುವುದು ಬೇಡವಾ? ಎಂದು ಯಾರಿಗೂ ಕೇಳದಂತೆ ಪಿಸುಧ್ವನಿಯಲ್ಲಿ ಹೇಳುತ್ತಿದ್ದರಂತೆ.
ರೋಹನ್ ಕನ್ಹೈ ಅವರು ಎದುರಾಳಿ ತಂಡದವರನ್ನು ಹುರಿದುಂಬಿಸುವ ಗುಣ ನೋಡಿ ನನಗೆ ಆಶ್ಚರ್ಯವಾಗಿತ್ತು. ರೋಹನ್ ಅವರ ವ್ಯಕ್ತಿತ್ವ ನನಗೆ ಬೆರಗು ತರಿಸಿತ್ತು. ಈ ಕಾರಣದಿಂದ ನನ್ನ ಮಗನಿಗೆ ರೋಹನ್ ಎಂದು ನಾಮಕರಣ ಮಾಡಿದೆ ಎಂದು ಗವಾಸ್ಕರ್ 30 ವರ್ಷಗಳ ಕಥೆ ಬಿಚ್ಚಿಟ್ಟಿದ್ದಾರೆ.