ETV Bharat / sports

ಇಂಡೋ-ಪಾಕ್ ಬೆಸ್ಟ್​ ಇಲೆವೆನ್ ತಂಡ​ ಪ್ರಕಟಿಸಿದ ಗವಾಸ್ಕರ್​... ಕೊಹ್ಲಿ, ಧೋನಿಗಿಲ್ಲ ಸ್ಥಾನ

ಭಾರತ ತಂಡದ ಮಾಜಿ ನಾಯಕ ಸುನಿಲ್​ ಗವಾಸ್ಕರ್ ಪಾಕಿಸ್ತಾನ-ಭಾರತದ ಮಿಕ್ಸ್​ ಇಲೆವೆನ್​ ತಂಡವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಭಾರತದ 6 ಪಾಕಿಸ್ತಾನದ 5 ಆಟಗಾರರನ್ನು ಅವರು ಆಯ್ಕೆ ಮಾಡಿದ್ದಾರೆ.

ಗವಾಸ್ಕರ್​ ಇಂಡೋ-ಪಾಕ್​​ ಇಲೆವೆನ್
ಗವಾಸ್ಕರ್​ ಇಂಡೋ-ಪಾಕ್​​ ಇಲೆವೆನ್
author img

By

Published : May 17, 2020, 12:50 PM IST

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್​ ಭಾರತ-ಪಾಕಿಸ್ತಾನ ಆಟಗಾರರನ್ನು ಒಂದುಗೂಡಿಸಿ ಬೆಸ್ಟ್​ ಇಲೆವೆನ್​ ತಂಡವನ್ನು ಘೋಷಿಸಿದ್ದಾರೆ. ಆದರೆ ಇದು ಅಂಕಿ-ಅಂಶಗಳ ಆಧಾರದ ಮೇಲಿನ ತಂಡವಲ್ಲ ಬದಲಾಗಿ ಈ ಆಟಗಾರರು ಒಟ್ಟಿಗೆ ಆಡಿದರೆ ತುಂಬಾ ಮಜಾ ಇರುತ್ತದೆ ಎಂದಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರ ರಮೀಝ್​​ ರಾಜಾ ಅವರ ಜೊತೆ ಲೈವ್​ನಲ್ಲಿ ಮಾತನಾಡಿದ ಅವರು, ಈ ಆಟಗಾರರು ಒಟ್ಟಿಗೆ ಆಡಿದರೂ ಅಥವಾ ಆಡದಿದ್ದರೂ ಏನಾಗುತ್ತದೆ ಎಂಬುದು ಬೇಕಾಗಿಲ್ಲ. ಆದರೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಬಹಳಷ್ಟು ಮಜಾ ಮಾತ್ರ ನಿರೀಕ್ಷಿಸುತ್ತೇನೆ. ಈ ಹುಡುಗರನ್ನು ಡ್ರೆಸ್ಸಿಂಗ್​ ರೂಮ್​ನಿಂದ ಹೊರ ತರುವುದೇ ಕಷ್ಟವಾಗುತ್ತದೆ. ಏಕೆಂದರೆ ಇವರೆಲ್ಲಾ ಮೋಜು ಮಾಡುತ್ತಾರೆ ಎಂದು ಗವಾಸ್ಕರ್​ ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಈ ತಂಡದಲ್ಲಿ ಭಾರತದ ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಹಾಗೂ ಎಂಎಸ್​ ಧೋನಿಯನ್ನು ಕೈಬಿಟ್ಟಿದ್ದಾರೆ.

ಇನ್ನು ತಮ್ಮ ತಂಡದಲ್ಲಿ ಆರಂಭಿಕರಾಗಿ ವಿರೇಂದ್ರ ಸೆಹ್ವಾಗ್​ ಜೊತೆಗೆ ಲೆಜೆಂಡರಿ ಪಾಕಿಸ್ತಾನಿ ಬ್ಯಾಟ್ಸ್​ಮನ್​ರನ್ನು ಆಯ್ಕೆ ಮಾಡಿದ್ದಾರೆ.

ಮೂರನೇ ಕ್ರಮಾಂದಲ್ಲಿ ಪಾಕಿಸ್ತಾನದ ಜಾಹೀರ್​ ಅಬ್ಬಾಸ್​, ನಾಲ್ಕನೇ ಕ್ರಮಾಂಕ್ಕೆ ಸಚಿನ್​ ತೆಂಡೂಲ್ಕರ್​, 5ನೇ ಕ್ರಮಾಂಕಕ್ಕೆ ಗುಂಡಪ್ಪ ವಿಶ್ವನಾಥ್​, 1983ರ ವಿಶ್ವಕಪ್​ ತಂಡದ ನಾಯಕ ಕಪಿಲ್​ ದೇವ್​ಗೆ 6ನೇ ಸ್ಥಾನ, ನಂತರ ದ ಸ್ಥಾನದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಹಾಲಿ ಪ್ರಧಾನಿ ಇಮ್ರಾನ್​ ಖಾನ್​ ರನ್ನು ಆಯ್ಕೆ ಮಾಡಿದ್ದಾರೆ.

8ನೇ ಹಾಗೂ ವಿಕೆಟ್ ಕೀಪರ್​ ಸ್ಥಾನಕ್ಕೆ ಭಾರತದ ಸಯ್ಯದ್​ ಕಿರ್ಮಾನಿಯನ್ನು ಆಯ್ಕೆ ಮಾಡಿರುವ ಗವಾಸ್ಕರ್​ 9 ನೇ ಸ್ಥಾನಲ್ಲಿ ವಾಸಿಮ್​ ಅಕ್ರಂ, 10 ಅಬ್ಧುಲ್​ ಖಾದೀರ್​ ಹಾಗು 11 ನೇಸ್ಥಾನದಲ್ಲಿ ಬಿಎಸ್​ ಚಂದ್ರಶೇಖರ್​ರನ್ನು ಆಯ್ಕೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.