ETV Bharat / sports

ಪ್ರಸ್ತುತ ಕೊಹ್ಲಿ ಪಡೆ ಭಾರತ ಕ್ರಿಕೆಟ್​ ಇತಿಹಾಸದಲ್ಲಿನ ಅತ್ಯುತ್ತಮ ಟೆಸ್ಟ್​ ತಂಡ: ಸುನಿಲ್​ ಗವಾಸ್ಕರ್​

ಸಮತೋಲದ ದೃಷ್ಟಿಯಿಂದ, ಸಾಮರ್ಥ್ಯದ ದೃಷ್ಟಿಯಿಂದ ಕೌಶಲ್ಯದ ಹಾಗೂ ಮನೋಧರ್ಮದ ದೃಷ್ಟಿಯಿಂದ ಈ ತಂಡ ಅತ್ಯುತ್ತಮ ಭಾರತೀಯ ಟೆಸ್ಟ್​ ತಂಡವಾಗಿದೆ ಎಂದು ನಾನು ನಂಬುತ್ತೇನೆ. ಇದಕ್ಕಿಂತ ಉತ್ತಮ ಭಾರತ ತಂಡದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಟಿವಿ ಚಾನೆಲ್​ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Sunil Gavaskar
ಭಾರತ ಕ್ರಿಕೆಟ್​ ಇತಿಹಾಸದಲ್ಲಿನ ಅತ್ಯುತ್ತಮ ಟೆಸ್ಟ್​ ತಂಡ
author img

By

Published : Aug 23, 2020, 1:18 PM IST

ನವದೆಹಲಿ: ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಪ್ರಸ್ತುತ ಕೊಹ್ಲಿ ನೇತೃತ್ವದ ಭಾರತ ತಂಡವೇ ಶ್ರೇಷ್ಠ ಟೆಸ್ಟ್​ ತಂಡ ಎಂದು ಲಿಟ್ಲ್​ ಮಾಸ್ಟರ್​ ಖ್ಯಾತಿಯ ಸುನಿಲ್​ ಗವಾಸ್ಕರ್​ ತಿಳಿಸಿದ್ದಾರೆ.

ಭಾರತ ಕ್ರಿಕೆಟ್​ ಕಂಡಂತಹ ಶ್ರೇಷ್ಠ ಕ್ರಿಕೆಟಿಗ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ 10 ಸಾವಿರ ಗಡಿದಾಟಿದ ಗವಾಸ್ಕರ್​ ಪ್ರಕಾರ ವಿರಾಟ್​ ಕೊಹ್ಲಿ ಪಡೆ ಭಾರತದ ಬೆಸ್ಟ್​ ಟೆಸ್ಟ್​ ಟೀಮ್​​ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡ ಪ್ರಸ್ತುತ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 7 ಗೆಲುವು ಹಾಗೂ 2 ಸೋಲುಗಳೊಂದಿಗೆ 360 ಅಂಕ ಪಡೆದುಕೊಂಡು ಅಗ್ರಸ್ಥಾನದಲ್ಲಿದೆ. ಅಲ್ಲದೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದರುವ ಮೊದಲ ಏಷ್ಯಾ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಮತೋಲದ ದೃಷ್ಟಿಯಿಂದ, ಸಾಮರ್ಥ್ಯದ ದೃಷ್ಟಿಯಿಂದ ಕೌಶಲ್ಯದ ಹಾಗೂ ಮನೋಧರ್ಮದ ದೃಷ್ಟಿಯಿಂದ ಇದು ಅತ್ಯುತ್ತಮ ಭಾರತೀಯ ಟೆಸ್ಟ್​ ತಂಡವಾಗಿದೆ ಎಂದು ನಾನು ನಂಬುತ್ತೇನೆ. ಇದಕ್ಕಿಂತ ಉತ್ತಮ ಭಾರತ ತಂಡದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಟಿವಿ ಚಾನೆಲ್​ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ತಂಡವೂ ಯಾವುದೇ ಸ್ಥಳದಲ್ಲಾದರೂ ಪಂದ್ಯ ಗೆಲ್ಲಿಸುವ ಬೌಲಿಂಗ್​ ದಾಳಿಯನ್ನು ಹೊಂದಿದೆ. ಈ ತಂಡಕ್ಕೆ ಪರಿಸ್ಥಿತಿಗಳ ಹಾಗೂ ಸ್ಥಳಗಳ ಬಗ್ಗೆ ಆಲೋಚಿಸುವ ಅಗತ್ಯವಿಲ್ಲ. 1980ರ ದಶಕದಲ್ಲೂ ಇದೇ ರೀತಿಯ ಅತ್ಯುತ್ತಮ ಸಾಮರ್ಥ್ಯವುಳ್ಳ ಬ್ಯಾಟ್ಸ್​ಮನ್​ಗಳನ್ನು ಭಾರತ ತಂಡ ಹೊಂದಿತ್ತು. ಆದರೆ ಕೊಹ್ಲಿ ಪಡೆಯಲ್ಲಿರುವ ಬೌಲರ್​ಗಳು ಇರಲಿಲ್ಲ ಎಂದು ಸನ್ನಿಭಾಯ್​ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡದ ಬೌಲಿಂಗ್​ ದಾಳಿಯನ್ನು ಮೆಚ್ಚಿಕೊಂಡಿರುವ ಭಾರತದ ಪರ 70ರ ದಶಕದಲ್ಲಿ 125 ಟೆಸ್ಟ್​ಗಳಿಂದ 10122 ರನ್​ಗಳಿಸಿರುವ ಗವಾಸ್ಕರ್​ ಆಸ್ಟ್ರೇಲಿಯಾದಂತಹ ತಂಡದ ವಿರುದ್ಧ ಭಾರತೀಯ ಬೌಲರ್​ಗಳು 20 ವಿಕೆಟ್​ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಬಣ್ಣಿಸಿದ್ದಾರೆ. ಪ್ರಸ್ತುತ ಬ್ಯಾಟ್ಸ್​ಮನ್​ಗಳು ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳಿಗಿಂತ ಹೆಚ್ಚು ರನ್​ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.