ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಭಾರತ ಮತ್ತು ವಿದೇಶದಲ್ಲೂ ಕೋಟ್ಯಾಂತರ ಅಭಿಮಾನಿ ವರ್ಗ ಸೃಷ್ಠಿಸಿಕೊಂಡಿದ್ದರು. ಆದರೆ ಸಚಿನ್ ನಿವೃತ್ತಿಯಾದ ನಂತರ ಅವರ ಅಭಿಮಾನಿಯಾಗಿರುವ ಭಾರತ ಮಹಿಳಾ ತಂಡದ ಆಟಗಾರ್ತಿಯೊಬ್ಬರ ಐಪಿಎಲ್ ನೋಡುವುದನ್ನೇ ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
ಭಾರತ ಮಹಿಳಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ವುಮನ್ ಅಗಿರುವ ಸುಷ್ಮಾ ವರ್ಮಾ ಸಚಿನ್ ತೆಂಡೂಲ್ಕರ್ 2013ರ ಐಪಿಎಲ್ ಗೆದ್ದನಂತರ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ಸುಷ್ಮಾ ವರ್ಮಾ ಕೂಡ ಅಂದಿನಿಂದ ತಾವೈ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ನೋಡುವುದನ್ನೇ ನಿಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಸಚಿನ್ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರಿಂದ ನಾನು ಐಪಿಎಲ್ ನೋಡುತ್ತಿದ್ದೆ. ಅವರು ನಿವೃತ್ತಿ ಹೊಂದಿದ ನಂತರ ಐಪಿಎಲ್ ನೋಡಲು ನನಗೆ ಆಸಕ್ತಿ ಬರಲಿಲ್ಲ ಎಂದು ಸುಷ್ಮಾ ವರ್ಮಾ ಐಎಎನ್ಎಸ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಆದರೆ ಟೆಸ್ ಕ್ರಿಕೆಟ್ ನೋಡಲು ತಮಗೆ ಇಷ್ಟ ಎಂದಿದ್ದಾರೆ.
ಒಮ್ಮೆ ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯಕ್ಕಾಗಿ ಧರ್ಮಾಶಾಲೆಗೆ ಬಂದಿತ್ತು. ಆ ಪಂದ್ಯದಲ್ಲಿ ಸಚಿನ್ ಆಟವನ್ನು ನೋಡಲು ಬಯಸಿದ್ದೆ. ದುರಾದೃಷ್ಟವಶಾತ್ ಸಚಿನ್ ಆ ಪಂದ್ಯದಲ್ಲಿ ಆಡಲಿಲ್ಲ. ಮತ್ತೆ ಅವತಿ ನಿವೃತ್ತಿ ಹೊಂದಿದ ನಂತರತ ಐಪಿಎಲ್ ವೀಕ್ಷಿಸುವುದನ್ನು ನಿಲ್ಲಿಸಿದೆ ಎಂದಿದ್ದಾರೆ.
ಸುಷ್ಮಾ ವರ್ಮಾ ಭಾರತ ಮಹಿಳಾ ತಂಡದ ಪರ 1 ಟೆಸ್ಟ್, 38 ಏಕದಿನ ಕ್ರಿಕೆಟ್ ಮತ್ತು 19 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ವಿಕೆಟ್ ಕೀಪಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಇವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 31 ಕ್ಯಾಚ್ ಪಡೆದಿದ್ದರೆ, 40 ಸ್ಟಂಪ್ ಮಾಡಿದ್ದಾರೆ. ಬ್ಯಾಟಿಂಗ್ನಲ್ಲಿ ಇವರ ಸಾಧನೆ ಹೇಳಿಕೊಳ್ಳುವಂತಿಲ್ಲ.