ETV Bharat / sports

ವಿರಾಟ್​ ಕೊಹ್ಲಿ ಟೆಸ್ಟ್ ಸರಣಿ ತಪ್ಪಿಸಿಕೊಳ್ಳುತ್ತಿರುವುದು ನಿರಾಶೆ ಮೂಡಿಸಿದೆ : ಸ್ಟೀವ್​ ವಾ - Aus vs Ind test series. India tour of Australia

ಈಗಾಗಲೇ ಎಲ್ಲವನ್ನು ಸಾಧಿಸಿರುವ ಕೊಹ್ಲಿ ವೃತ್ತಿ ಜೀವನವನ್ನು ಅವಿಸ್ಮರಣೀಯವಾಗಿರಿಸಿಕೊಳ್ಳಲು ಈ ಸರಣಿ ನೆರವಾಗುತ್ತಿತ್ತು. ಆದರೆ, ಎಲ್ಲದಕ್ಕೂ ಮೊದಲು ಕುಟುಂಬವೇ ಬರುತ್ತದೆ..

ಸ್ಟಿವ್​ ವಾ
ಸ್ಟಿವ್​ ವಾ
author img

By

Published : Nov 10, 2020, 7:32 PM IST

ಮೆಲ್ಬೋರ್ನ್​ : ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಕೊನೆಯ ಮೂರು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಿರುವುದಕ್ಕೆ ಮಾಜಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್​ ವಾ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಜನವರಿಯಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷಿಯಲ್ಲಿದ್ದಾರೆ. ಹಾಗಾಗಿ, ಕೊಹ್ಲಿಗೆ ಬಿಸಿಸಿಐ ಪಿತೃತ್ವ ರಜೆ ನೀಡಿದೆ. ಡಿಸೆಂಬರ್​ 21ರಂದು ಅಹರ್ನಿಶಿ ಟೆಸ್ಟ್​ ಮುಗಿಯುತ್ತಿದ್ದಂತೆ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ.

ಕೊಹ್ಲಿ ಗೈರಿನಲ್ಲಿ ಭಾರತದ ವಶದಲ್ಲಿರುವ ಬಾರ್ಡರ್ ಗವಾಸ್ಕರ್​ ಟ್ರೋಫಿಯನ್ನು ಮರಳಿ ಪಡೆಯಲು ಆಸ್ಟ್ರೇಲಿಯಾ ತಂಡಕ್ಕೆ ಸುವರ್ಣಾವಕಾಶ ದೊರೆತಿದೆ. ಆದರೆ, ಕೊಹ್ಲಿಯಂತಹ ಜನಪ್ರಿಯ ಕ್ರಿಕೆಟಿಗ ಇಲ್ಲದಿದ್ದರೆ, ಈಗಾಗಲೇ ಕೋವಿಡ್​ ಸಂಕಷ್ಟದಿಂದ ನಷ್ಟದಲ್ಲಿರುವ ಕ್ರಿಕೆಟ್​ ಆಸ್ಟ್ರೇಲಿಯಾ ಮತ್ತು ಪ್ರಸಾರಕರಿಗೆ ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.

"ಕೊಹ್ಲಿ ಟೆಸ್ಟ್​ ಸರಣಿಯಲ್ಲಿ ಆಡುವುದಿಲ್ಲ ಎನ್ನುವುದನ್ನು ಕೇಳಿ ನಿರಾಶೆಗೊಂಡಿದ್ದೇನೆ. ಹಾಗೂ ಸ್ವಲ್ಪ ಆಶ್ವರ್ಯ ಕೂಡ ಆಗಿದೆ"ಎಂದು ಆಸ್ಟ್ರೇಲಿಯಾ ಪರ 168 ಟೆಸ್ಟ್​ ಪಂದ್ಯಗಳನ್ನಾಡಿರುವ ವಾ ಹೇಳಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

"ಈಗಾಗಲೇ ಎಲ್ಲವನ್ನು ಸಾಧಿಸಿರುವ ಕೊಹ್ಲಿ ವೃತ್ತಿ ಜೀವನವನ್ನು ಅವಿಸ್ಮರಣೀಯವಾಗಿರಿಸಿಕೊಳ್ಳಲು ಈ ಸರಣಿ ನೆರವಾಗುತ್ತಿತ್ತು. ಆದರೆ, ಎಲ್ಲದಕ್ಕೂ ಮೊದಲು ಕುಟುಂಬವೇ ಬರುತ್ತದೆ" ಎಂದು ಅವರು ಹೇಳಿದ್ದಾರೆ.

ಐಪಿಎಲ್ ಫೈನಲ್ ಪಂದ್ಯ ಮುಗಿಯುತ್ತಿದ್ದಂತೆ ಭಾರತ 2 ದಿನಗಳ ನಂತರ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ 2 ವಾರಗಳ ಕ್ವಾರಂಟೈನ್ ಮುಗಿಸಿದ ನಂತರ ನವೆಂಬರ್​ 27ರಿಂದ ಏಕದಿನ ಹಾಗೂ ಟೆಸ್ಟ್​ ಸರಣಿಯನ್ನಾಡಲಿದೆ. ಡಿಸೆಂಬರ್​ 17ರಿಂದ ಟೆಸ್ಟ್​ ಸರಣಿಯನ್ನಾಡಲಿದ್ದು, ಈ ಪಂದ್ಯದ ನಂತರ ಕೊಹ್ಲಿ ತವರಿಗೆ ಮರಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.