ETV Bharat / sports

ವೃತ್ತಿ ಜೀವನದ ಅಂತ್ಯದೊಳಗೆ ಎರಡು ಪರ್ವತಗಳನ್ನು ಏರಬೇಕು... ಸ್ಮಿತ್ ಮನದಾಳ

author img

By

Published : Aug 6, 2020, 1:15 PM IST

ತಮ್ಮ ಕ್ರಿಕೆಟ್​ ವೃತ್ತಿ ಜೀವನ ಅಂತ್ಯದೊಳಗೆ ಎರಡು ಬಹು ದೊಡ್ಡ ಪರ್ವತಗಳನ್ನು ಏರಬೇಕಿದೆ ಎಂದು ಆಸೀಸ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ತಮ್ಮ ಮನದಾಳವನ್ನು ಬಹಿರಂಗಪಡಿಸಿದ್ದಾರೆ.

Steve Smith
ಸ್ಟೀವ್ ಸ್ಮಿತ್

ಮೆಲ್ಬೋರ್ನ್: ತಮ್ಮ ವೃತ್ತಿಜೀವನದ ಅಂತ್ಯಕ್ಕೂ ಮೊದಲು ಪ್ರತಿಸ್ಪರ್ಧಿ ಇಂಗ್ಲೆಂಡ್ ಅನ್ನು ಅವರದೇ ನೆಲದಲ್ಲಿ ಸೋಲಿಸುವುದು ಮತ್ತು ಭಾರತದಲ್ಲಿ ಟೆಸ್ಟ್ ಯಶಸ್ಸನ್ನು ಸಾಧಿಸುವುದು ಈ ಎರಡು ದೊಡ್ಡ ಪರ್ವತಗಳನ್ನು ಏರಲು ಬಯಸುತ್ತೇನೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಆ್ಯಶಸ್ ಅನ್ನು 2-2ರ ಸಮಬಲದೊಂದಿಗೆ ಆಸ್ಟ್ರೇಲಿಯಾ ಉಳಿಸಿಕೊಂಡಿತ್ತು. ಆದರೆ ಓವಲ್‌ನಲ್ಲಿ ನಡೆದ ಕೊನೆಯ ಟೆಸ್ಟ್‌ನಲ್ಲಿನ ಸೋಲು ಕಂಡಿತ್ತು. ಸ್ಮಿತ್ ನಾಲ್ಕು ಟೆಸ್ಟ್‌ಗಳಲ್ಲಿ 110.57 ಸರಾಸರಿಯಲ್ಲಿ 774 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರದರ್ಶನ ತೋರಿದ್ದರು.

Steve Smith
ಸ್ಟೀವ್ ಸ್ಮಿತ್

31 ವರ್ಷದ ಸ್ಮಿತ್ 2017 ರಲ್ಲಿ ಭಾರತದಲ್ಲಿ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೂರು ಶತಕಗಳನ್ನು ಗಳಿಸಿದ್ದರು. ಆದರೆ, ಆಸ್ಟ್ರೇಲಿಯಾ 1-2 ಅಂತರದಲ್ಲಿ ಸೋಲನುಭವಿಸಿತ್ತು.

ಆ ಎರಡು ದೊಡ್ಡ ಪರ್ವತಗಳನ್ನು ಏರಬೇಕಿದೆ. ಒಂದು ವೇಳೆ ಅದು ನಿಜವಾದರೆ ನಿಜಕ್ಕೂ ಅದು ನನಗೆ ವಿಶೇಷವಾದದ್ದು. ಈ ಬಗ್ಗೆ ನಾನು ಆಶಾದಾಯಕವಾಗಿದ್ದು, ಏನಾನುತ್ತದೆ ಕಾದು ನೋಡಬೇಕೆಂದು Cricket.com.au ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Steve Smith
ಟೆಸ್ಟ್ ಕ್ರಿಕೆಟ್​ನಲ್ಲಿ ಸ್ಟೀವ್ ಸ್ಮಿತ್ ಸಾಧನೆ

ನನಗೆ ಈಗಾಗಲೇ ವಯಸ್ಸಾಗುತ್ತಿದೆ. ಇನ್ನು ಎಷ್ಟು ಸಮಯ ಉಳಿದಿದೆ ಎಂದು ತಿಳಿದಿಲ್ಲ. ಭವಿಷ್ಯದ ಬಗ್ಗೆ ಅರಿವಿಲ್ಲ. ಆದರೆ ಇದು ಖಂಡಿತವಾಗಿಯೂ ಶ್ರಮಿಸಬೇಕಾದ ಸಂಗತಿಯಾಗಿದೆ. ಅದಂತು ಸತ್ಯವೆಂದು ತಮ್ಮ ಮನದಾಳ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.