ಮುಂಬೈ: ವಿಶ್ವದ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು 3 ಮಾದರಿಯಲ್ಲಿನ ಶ್ರೇಷ್ಠ ಕ್ರಿಕೆಟಿಗ ಎಂಬುದು ಕೇವಲ ಅತಿಶಯೋಕ್ತಿ ಎಂದ ಶ್ರೀಲಂಕಾ ಪತ್ರಕರ್ತನಿಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಅಲೆಕ್ಸ್ ಟ್ಯುಡೋರ್ ತಿರುಗೇಟು ನೀಡಿದ್ದಾರೆ.
ಶ್ರೀಲಂಕಾದ ಜರ್ನಲಿಸ್ಟ್ ಡೇನಿಯಲ್ ಅಲೆಕ್ಸಾಂಡರ್ ಎಂಬುವರು ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ ಸೋಲುತ್ತಿದ್ದಂತೆ ಕೊಹ್ಲಿ ಕಾಲೆಳೆಯಲು ಯತ್ನಿಸಿ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
'ವಿರಾಟ್ ಕೊಹ್ಲಿ ಸದ್ಯ ಕಿವೀಸ್ ಸರಣಿಯಲ್ಲಿ ಎಲ್ಲಾ ಮೂರು ಮಾದರಿ ಕ್ರಿಕೆಟ್ ಪಂದ್ಯಗಳಿಂದ 19, 2,9,15, 51,11, 38,11,45 ರನ್ಗಳಿಸಿದ್ದಾರೆ. ಒಟ್ಟಾರೆ 9 ಇನ್ನಿಂಗ್ಸ್ಗಳಲ್ಲಿ ಒಂದು ಅರ್ಧಶತಕದ ನೆರವಿನಿಂದ 201 ರನ್ ಗಳಿಸಿದ್ದಾರೆ' ಎಂದು ಬರೆದಿದ್ದಾರೆ.
ಜೊತೆಗೆ ಸ್ಟಿವ್ ಸ್ಮಿತ್, ಬಾಬರ್ ಅಜಮ್ ಮತ್ತು ಕೇನ್ ವಿಲಿಯಮ್ಸನ್ ಎಲ್ಲಾ ಮಾದರಿಯ ಕ್ರಿಕೆಟರ್ಗಳು. ಅವರು ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಎಲ್ಲಿ ಬೇಕಾದರೂ ಆಡಬಲ್ಲರು. ಆದರೆ ಕೊಹ್ಲಿ ಹೆಸರು ಕೇವಲ ಉತ್ಪ್ರೇಕ್ಷೆ ಎಂದು ಟ್ವೀಟ್ ಮಾಡಿದ್ದಾರೆ.
-
Overrated 😏 are you just looking for people to hit up your timeline 🤷🏾♂️ one bad tour & people coming for the great man 👎🏿 https://t.co/xbUdXejnV1
— Alex Tudor (@alextudorcoach) February 23, 2020 " class="align-text-top noRightClick twitterSection" data="
">Overrated 😏 are you just looking for people to hit up your timeline 🤷🏾♂️ one bad tour & people coming for the great man 👎🏿 https://t.co/xbUdXejnV1
— Alex Tudor (@alextudorcoach) February 23, 2020Overrated 😏 are you just looking for people to hit up your timeline 🤷🏾♂️ one bad tour & people coming for the great man 👎🏿 https://t.co/xbUdXejnV1
— Alex Tudor (@alextudorcoach) February 23, 2020
ಈ ಟ್ವೀಟ್ ಮಾಡುತ್ತಿದ್ದಂತೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಅಲೆಕ್ಸ್ ಟ್ಯುಡೋರ್ ಪ್ರತಿಕ್ರಿಯೆ ನೀಡಿದ್ದು, 'ಕೇವಲ ಜನರು ನಿಮ್ಮ ಟೈಮ್ಲೈನ್ ಗಮನಿಸುವುದನ್ನು ಎದುರು ನೋಡುತ್ತಿದ್ದೀರಾ. ಕೇವಲ ಒಂದು ಪ್ರವಾಸದಲ್ಲಿ ವಿಫಲನಾದರೆ ಕೆಲವು ಜನರು ಒಬ್ಬ ಅತ್ಯುತ್ತಮ ಆಟಗಾರನ ಬಗ್ಗೆ ಮಾತನಾಡಲು ಬರುತ್ತಾರೆ' ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಭಾರತೀಯ ಅಭಿಮಾನಿಗಳಂತೂ ಕೊಹ್ಲಿ ಈ ಹಿಂದಿನ ಸರಣಿಗಳ ಅಂಕಿ ಅಂಶಗಳನ್ನು ಬರೆದು ಅಲೆಕ್ಸಾಂಡರ್ಗೆ ತಿರುಗೇಟು ನೀಡಿದ್ದಾರೆ.