ಕೊಲಂಬೊ: 2009ರಲ್ಲಿ ಪಾಕ್ ಪ್ರವಾಸದಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಅಲ್ಲಿನ ಭಯೋತ್ಪಾದಕರು ದಾಳಿ ನಡೆಸಿ, ಆರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ಸ್ಥಳೀಯರು ಸಾವನ್ನಪ್ಪಿದ್ರೆ, ಕೆಲ ಲಂಕಾ ಪ್ಲೇಯರ್ಸ್ ಕೂಡ ಗಾಯಗೊಂಡಿದ್ದರು. ಘಟನೆ ನಡೆದ ಬಳಿಕ ಶ್ರೀಲಂಕಾ ಇದೀಗ ಮತ್ತೊಮ್ಮೆ ಪಾಕ್ಗೆ ಪ್ರಯಾಣ ಬೆಳೆಸಲು ಸಜ್ಜುಗೊಂಡಿದೆ.
ಪಾಕ್ ವಿರುದ್ಧ ಮೂರು ಏಕದಿನ ಪಂದ್ಯ ಹಾಗೂ ಕೆಲ ಟಿ-20 ಪಂದ್ಯಗಳಲ್ಲಿ ಭಾಗಿಯಾಗಲು ಶ್ರೀಲಂಕಾ ಕ್ರಿಕೆಟ್ ತಂಡ ಪಾಕ್ಗೆ ಸೆಪ್ಟೆಂಬರ್ನಲ್ಲಿ ಪ್ರಯಾಣ ಬೆಳೆಸಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಸೆಪ್ಟೆಂಬರ್ 27ರಂದು ಮೊದಲ ಏಕದಿನ, ಸೆಪ್ಟಂಬರ್ 29ರಂದು ಎರಡನೇ ಏಕದಿನ ಹಾಗೂ ಅಕ್ಟೋಬರ್ 2ರಂದು ಮೂರನೇ ಏಕದಿನ ಹಾಗೂ ಅಕ್ಟೋಬರ್ 5ರಂದು ಮೊದಲ ಟಿ-20 ಪಂದ್ಯದಲ್ಲಿ ಲಂಕಾ ತಂಡ ಭಾಗಿಯಾಗಲಿದ್ದು, ಎಲ್ಲ ಪಂದ್ಯಗಳು ಕರಾಚಿ ಹಾಗೂ ಲಾಹೋರ್ನಲ್ಲಿ ನಡೆಯಲಿವೆ. ಇನ್ನು ಡಿಸೆಂಬರ್ ತಿಂಗಳಲ್ಲಿ ಉಭಯ ದೇಶಗಳ ನಡುವೆ ಚಾಂಪಿಯನ್ ಟ್ರೋಫಿಯ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಲಾಹೋರ್ ನ ಗಡಾಫಿ ಕ್ರೀಡಾಂಗಣದ ಹೊರಗೆ ದಾಳಿ ನಡೆದಿತ್ತು. ಇದಾದ ಬಳಿಕ ಪಾಕ್ ತನ್ನ ನೆಲದಲ್ಲಿ ಕ್ರಿಕೆಟ್ ನಡೆಸಲು ಅನೇಕ ಸಲ ಹರಸಾಹಸ ಪಟ್ಟಿದೆ. 2015ರಲ್ಲಿ ಜಿಂಬಾಬ್ವೆ,2017ರಲ್ಲಿ ವಿಶ್ವ XI, 2017ರಲ್ಲೇ ಶ್ರೀಲಂಕಾ ಹಾಗೂ 2018ರಲ್ಲಿ ವೆಸ್ಟ್ ಇಂಡೀಸ್ ತಂಡ ಪಾಕ್ಗೆ ಪ್ರಯಾಣ ಬೆಳೆಸಿ ಕ್ರಿಕೆಟ್ ಆಡಿವೆ. ಆದರೆ ಭಾರತ,ದಕ್ಷಿಣ ಆಫ್ರಿಕಾ,ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್,ಇಂಗ್ಲೆಂಡ್ನಂತಹ ಬಲಿಷ್ಠ ತಂಡಗಳು ಇಲ್ಲಿಗೆ ಪ್ರಯಾಣ ಬೆಳೆಸಿಲ್ಲ.