ETV Bharat / sports

2011ರ ವಿಶ್ವಕಪ್​ ಫೈನಲ್​​​​ನಲ್ಲಿ ಫಿಕ್ಸಿಂಗ್​ ಆರೋಪ: ಕ್ರಿಮಿನಲ್​ ತನಿಖೆಗೆ ಲಂಕಾ ಸರ್ಕಾರದ ಆದೇಶ - K.D.S. Ruwanchandr

2011ರ ಫೈನಲ್​ ಪಂದ್ಯದಲ್ಲಿ ಫಿಕ್ಸಿಂಗ್​ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ಘಟಕದಿಂದ ಕ್ರಿಮಿನಲ್​ ವಿಚಾರಣೆ ಆರಂಭಿಸಲಾಗಿದೆ ಎಂದು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಕೆಡಿಎಸ್ ರುವಾನ್​​ಚಂದ್ರ )KDS Ruwanchandra) ಮಾಧ್ಯಮಕ್ಕೆ ತಿಳಿಸಿದ್ದಾರೆ.

2011 world cup final
2011 ವಿಶ್ವಕಪ್​ ಫೈನಲ್​
author img

By

Published : Jun 30, 2020, 2:41 PM IST

ಕೊಲಂಬೊ: 2011ರ ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಫಿಕ್ಸಿಂಗ್​ ನಡೆದಿದೆ ಎಂಬ ಆರೋಪವನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಮಂಗಳವಾರ ಕ್ರಿಮಿನಲ್​ ತನಿಖೆ ನಡೆಸಲು ಆದೇಶಿಸಿದೆ.

ಕಳೆದ ವಾರವಷ್ಟೇ 2011ರಲ್ಲಿ ಶ್ರೀಲಂಕಾದ ಕ್ರೀಡಾ ಸಚಿವರಾಗಿದ್ದ ಮಹಿಂದಾನಂದ ಅಲುತ್ ​ಗಮಗೆ, 2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ಗೆ ಒಳಗಾಗಿತ್ತು. ಶ್ರೀಲಂಕಾ ತಂಡ ವಿಶ್ವಕಪ್​ ಅನ್ನು ಭಾರತಕ್ಕೆ ಮಾರಾಟ ಮಾಡಿತ್ತು ಎಂದು ಆರೋಪಿಸಿ ದೊಡ್ಡ ವಿವಾದ ಸೃಷ್ಟಿಸಿದ್ದರು. ಅವರಷ್ಠೇ ಅಲ್ಲದೆ 1996ರ ವಿಶ್ವಕಪ್​ ವಿಜೇತ ತಂಡದ ನಾಯಕ ಅರ್ಜುನ್​ ರಣತುಂಗಾ ಕೂಡ ವಿಶ್ವಕಪ್​ ಫೈನಲ್​ ಪಂದ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು.

2011cricket-world-cup
2011 ವಿಶ್ವಕಪ್​

ಆದರೆ, ಈ ವಿವಾದವನ್ನು ಅಲ್ಲೆಗಳೆದಿದ್ದ ಅಂದಿ ಲಂಕಾ ತಂಡದ ನಾಯಕ ಕುಮಾರ್​ ಸಂಗಾಕ್ಕರ ಹಾಗೂ ಹಿರಿಯ ಬ್ಯಾಟ್ಸ್​ಮನ್​ ಮಹೇಲಾ ಜಯವರ್ದನೆ ಈ ಆರೋಪಕ್ಕೆ ಸಾಕ್ಷ್ಯಗಳಿದ್ದರೆ ಐಸಿಸಿ ಭ್ರಷ್ಟಾಚಾರ ಸಮಿತಿಗೆ ನೀಡಿ ಎಂದು ಸವಾಲ್​ ಎಸೆದಿದ್ದರು.

ಇದೀಗ ಆ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ಘಟಕಾದಿಂದ ಕ್ರಿಮಿನಲ್​ ವಿಚಾರಣೆ ಆರಂಭಿಸಲಾಗಿದೆ ಎಂದು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಕೆಡಿಎಸ್ ರುವಾನಚಂದ್ರ ಮಾಧ್ಯಮಕ್ಕೆ ತಿಳಿಸಿದ್ದಾರೆ.

2011-cricket-world-cup
2011 ವಿಶ್ವಕಪ್​

ಇನ್ನು 2011ರಲ್ಲಿ ಶ್ರೀಲಂಕಾ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಮಾಜಿ ನಾಯಕ ಅರವಿಂದ ಡಿ ಸಿಲ್ವಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.