ಕೊಲಂಬೊ : ಕೊರೊನಾ ವೈರಸ್ ಭೀತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದ 13 ಕ್ರಿಕೆಟಿಗರ ತಂಡ ಜೂನ್ 1ರಿಂದ ಮೈದಾನಕ್ಕಿಳಿದು ಅಭ್ಯಾಸ ನಡೆಸಲಿದೆ.
13 ಆಟಗಾರರನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ. ಇವರು ಕೊಲಂಬೊ ಕ್ರಿಕೆಟ್ ಕ್ಲಬ್ನಲ್ಲಿ 12 ದಿನಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಜೊತೆಗೆ ಈ ಎಲ್ಲಾ ಆಟಗಾರರು ಸರ್ಕಾರ ನೀಡಿರುವ ಆರೋಗ್ಯ ಸಂಬಂಧಿ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ತಿಳಿಸಿದೆ.
ಈ ಶಿಬಿರದಲ್ಲಿ ಹೆಚ್ಚಾಗಿ ಬೌಲರ್ಗಳೇ ಭಾಗವಹಿಸಲಿದ್ದಾರೆ. ಇವರೆಲ್ಲರೂ ಮೂರು ಮಾದರಿಯ ತಂಡದಲ್ಲಿ ಸಾಮಾನ್ಯವಾಗಿರುವ ಆಟಗಾರರಾಗಿದ್ದಾರೆ. ಯಾಕಂದರೆ, ಇವರೆಲ್ಲರೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾಗವಹಿಸುವುದರಿಂದ ಕಂಡೀಷನ್ಸ್ಗೆ ಹೆಚ್ಚು ಸಮಯ ಬೇಕಾಗಬಹುದೆಂದು ಆಯ್ಕೆ ಮಾಡಲಾಗಿದೆ ಎಂದು ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಶ್ರೀಲಂಕಾ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿತ್ತು. ಕೊರೊನಾ ಭೀತಿಯಿಂದ ಇಂಗ್ಲೆಂಡ್ ತಂಡ ಪ್ರವಾಸವನ್ನು ಅರ್ಧದಲ್ಲೇ ಬಿಟ್ಟು ತವರಿಗೆ ಮರಳಿತ್ತು.