ETV Bharat / sports

ಬಾಂಗ್ಲಾ ವಿರುದ್ಧ ಕೊನೆಯ ಏಕದಿನ ಪಂದ್ಯ ಗೆದ್ದು ಕುಲಶೇಖರ್​ಗೆ​ ಅರ್ಪಿಸಲಿರುವ ಲಂಕಾ

ಬುಧವಾರ ನಡೆಯಲಿರುವ ಅಂತಿಮ ಪಂದ್ಯವನ್ನು ಗೆದ್ದು, ಅದನ್ನು 2011 ವಿಶ್ವಕಪ್​ನಲ್ಲಿ ತಂಡ ಫೈನಲ್​ಗೇರಲು ನೆರವಾಗಿದ್ದ ನುವಾನ್​ ಕುಲಶೇಖರ್​ ಅವರಿಗೆ ಅರ್ಪಿಸಬೇಕೆಂಬುದು ಲಂಕಾ ಕ್ರಿಕೆಟಿಗರ ಆಸೆಯಾಗಿದೆ.

Sri Lanka Cricket
author img

By

Published : Jul 30, 2019, 3:21 PM IST

ಕೊಲೊಂಬೊ: ಬಾಂಗ್ಲಾದೇಶದ ವಿರುದ್ಧದ ಕೊನೆಯ ಏಕದಿನ ಪಂದ್ಯವನ್ನು ಗೆದ್ದು, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವ ನುವಾನ್​ ಕುಲಶೇಖರಗೆ ಅರ್ಪಿಸುವ ಅಭಿಲಾಷೆಯನ್ನು ಲಂಕಾ ತಂಡ ವ್ಯಕ್ತಪಡಿಸಿದೆ.

44 ತಿಂಗಳ ನಂತರ ತವರಿನಲ್ಲಿ ಏಕದಿನ ಸರಣಿ ಗೆದ್ದಿರುವ ಶ್ರೀಲಂಕಾ ತಂಡ ತನ್ನ ಮೊದಲ ಪಂದ್ಯವನ್ನು 91 ರನ್​ಗಳಿಂದ ಗೆದ್ದು ವೇಗಿ ಲಸಿತ್​ ಮಲಿಂಗಾಗೆ ವಿದಾಯದ ಉಡುಗೊರೆಯಾಗಿ ನೀಡಿತ್ತು. ನಂತರ ಎರಡನೇ ಪಂದ್ಯವನ್ನು 7 ವಿಕೆಟ್​ಗಳಿಂದ ಗೆಲ್ಲುವ ಮೂಲಕ 44 ತಿಂಗಳ ಸರಣಿ ಜಯದ ಬರವನ್ನು ನೀಗಿಸಿಕೊಂಡಿತ್ತು.

ಇದೀಗ ಬುಧವಾರ ನಡೆಯಲಿರುವ ಅಂತಿಮ ಪಂದ್ಯವನ್ನು ಗೆದ್ದು ಅದನ್ನು 2011 ವಿಶ್ವಕಪ್​ನಲ್ಲಿ ತಂಡ ಫೈನಲ್​ಗೇರಲು ನೆರವಾಗಿದ್ದ ನುವಾನ್​ ಕುಲಶೇಖರ್​ ಅವರಿಗೆ ಅರ್ಪಿಸಲು ಲಂಕಾ ತಂಡದ ಆಟಗಾರರು ಉತ್ಸುಕರಾಗಿದ್ದಾರೆ. ಇದರ ಜೊತೆಗೆ ತವರಿನ ಲಾಭ ಪಡೆದು ಕ್ಲೀನ್​ಸ್ವೀಪ್​ ಸಾಧಿಸುವ ಉದ್ದೇಶ ಹೊಂದಿದೆ.

37 ವರ್ಷದ ನುವಾನ್​ ಕುಲಶೇಖರ್ ಶ್ರೀಲಂಕಾ ತಂಡದ ಪರ 21 ಟೆಸ್ಟ್​, 184 ಏಕದಿನ ಹಾಗೂ 58 ಟಿ-20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ನಲ್ಲಿ 48 ವಿಕೆಟ್​ ಹಾಗೂ 391 ರನ್​, ಏಕದಿನ ಕ್ರಿಕೆಟ್​ನಲ್ಲಿ 199 ವಿಕೆಟ್​ ಹಾಗೂ 4 ಅರ್ಧಶತಕದ ಜೊತೆಗೆ 1325 ರನ್ ಹಾಗೂ ಟಿ-20 ಯಲ್ಲಿ​ 66 ವಿಕೆಟ್​ ಪಡೆದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.