ಅಬುಧಾಬಿ: ಕೆಕೆಆರ್ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಸನ್ರೈಸರ್ಸ್ ಹೈದರಾಬಾದ್ ತಂಡ ಮಾರ್ಗನ್ ಬಳಗವನ್ನು 163 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ ತಂಡ ಪವರ್ ಪ್ಲೇನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ಮೊದಲ ವಿಕೆಟ್ಗೆ 48 ರನ್ಗಳ ಜೊತೆಯಾಟ ನೀಡಿತು. ಈ ವೇಳೆ ಬೌಲಿಂಗ್ ದಾಳಿಗಿಳಿದ ನಟರಾಜನ್16 ಎಸೆತಗಳಲ್ಲಿ 23 ರನ್ಗಳಿಸಿದ್ದ ತ್ರಿಫಾಠಿಯನ್ನು ಬೌಲ್ಡ್ ಮಾಡಿ ಹೈದರಾಬಾದ್ಗೆ ಮೊದಲ ಬ್ರೇಕ್ ತಂದುಕೊಟ್ಟರು.
-
Innings Break!
— IndianPremierLeague (@IPL) October 18, 2020 " class="align-text-top noRightClick twitterSection" data="
A 58-run partnership at the back end of the innings between DK and Morgan propel #KKR to a total of 163/5.
Live - https://t.co/OX1V4mtyV3 #Dream11IPL pic.twitter.com/Ulbg7Z3rcz
">Innings Break!
— IndianPremierLeague (@IPL) October 18, 2020
A 58-run partnership at the back end of the innings between DK and Morgan propel #KKR to a total of 163/5.
Live - https://t.co/OX1V4mtyV3 #Dream11IPL pic.twitter.com/Ulbg7Z3rczInnings Break!
— IndianPremierLeague (@IPL) October 18, 2020
A 58-run partnership at the back end of the innings between DK and Morgan propel #KKR to a total of 163/5.
Live - https://t.co/OX1V4mtyV3 #Dream11IPL pic.twitter.com/Ulbg7Z3rcz
ಇತ್ತ ಗಿಲ್ ರನ್ಗಳಿಸಲು ಪರದಾಡಿ ಕೊನೆಗೆ 37 ಎಸೆತಗಳಲ್ಲಿ 5 ಬೌಂಡರಿ ಸಹಿತ 36 ರನ್ಗಳಿಸಿ ಔಟಾದರು. ನಂತರದ ಓವರ್ನಲ್ಲೇ 29 ರನ್ಗಳಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಣಾ ವಿಜಯ್ ಶಂಕರ್ಗೆ ವಿಕೆಟ್ ಒಪ್ಪಿಸಿದರು.
ಸ್ಫೋಟಕ ಬ್ಯಾಟ್ಸ್ಮನ್ ರಸೆಲ್(9) ಮತ್ತೊಮ್ಮೆ ವಿಫಲರಾದರು. ಆದರೆ 5ನೇ ವಿಕೆಟ್ ಜೊತೆಯಾದ ಹಾಲಿ ನಾಯಕ ಮಾರ್ಗನ್ ಹಾಗೂ ಮಾಜಿ ನಾಯಕ ಕಾರ್ತಿಕ್ 58 ರನ್ಗಳ ಜೊತೆಯಾಟ ನೀಡಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಮಾರ್ಗನ್ 22 ಎಸೆತಗಳಲ್ಲಿ 34 ಹಾಗೂ ಕಾರ್ತಿಕ್ 14 ಎಸೆತಗಳಲ್ಲಿ ತಲಾ 2 ಬೌಂಡರಿ- ಸಿಕ್ಸರ್ಗಳ ನೆರವಿನಿಂದ 29 ರನ್ಗಳಿಸಿದರು.
ಹೈದರಾಬಾದ್ ಪರ ನಟರಾಜನ್ 2, ರಶೀದ್ ಖಾನ್ , ವಿಜಯ ಶಂಕರ್,ಬಾಸಿಲ್ ತಂಪಿ ತಲಾ ಒಂದು ವಿಕೆಟ್ ಪಡೆದರು