ಶಾರ್ಜಾ: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಆರ್ಸಿಬಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್ 5 ವಿಕೆಟ್ಗಳ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಪಂಜಾಬ್ ಹಿಂದಿಕ್ಕಿ 4ನೇ ಸ್ಥಾನಕ್ಕೇರಿದೆ.
ಆರ್ಸಿಬಿ ನೀಡಿದ 121 ರನ್ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಹೈದರಾಬಾದ್ ತಂಡ ಕೇವಲ 14.1 ಓವರ್ಗಳಲ್ಲಿ ಗುರಿ ತಲುಪಿ, ಉತ್ತಮ ರನ್ರೇಟ್ ಪಡೆದು 7ನೇ ಸ್ಥಾನದಿಂದ ನೇರವಾಗಿ 4ನೇ ಸ್ಥಾನಕ್ಕೇರಿದೆ.
ನಿರ್ಣಾಯಕ ಪಂದ್ಯದಲ್ಲಿ ಸುಲಭ ಜಯದ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ ವಾರ್ನರ್(8) ವಿಕೆಟ್ ಬೇಗ ಕಳೆದುಕೊಂಡರೂ, ಮನೀಶ್ ಪಾಂಡೆ, ಸಹಾ ಹಾಗೂ ಹೋಲ್ಡರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಸುಲಭವಾಗಿ ಜಯದ ಗುರಿ ತಲುಪಿತು.
-
A 5-wicket win and two crucial points in the bag for @SunRisers 💪💪#Dream11IPL pic.twitter.com/rsuO6svtVx
— IndianPremierLeague (@IPL) October 31, 2020 " class="align-text-top noRightClick twitterSection" data="
">A 5-wicket win and two crucial points in the bag for @SunRisers 💪💪#Dream11IPL pic.twitter.com/rsuO6svtVx
— IndianPremierLeague (@IPL) October 31, 2020A 5-wicket win and two crucial points in the bag for @SunRisers 💪💪#Dream11IPL pic.twitter.com/rsuO6svtVx
— IndianPremierLeague (@IPL) October 31, 2020
ಕಳೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ಹೀರೋ ಆಗಿದ್ದ ವೃದ್ಧಿಮಾನ್ ಸಹಾ ಮತ್ತೊಮ್ಮೆ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಪಾಂಡೆ ಜೊತೆ 2ನೇ ವಿಕೆಟ್ಗೆ 50 ರನ್ಗಳ ಜೊತೆಯಾಟ ನೀಡಿದರು. ಪಾಂಡೆ 19 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 26 ರನ್ಗಳಿಸಿದರೆ, ಸಹಾ 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 39 ರನ್ಗಳಿಸಿದರು.
ನಂತರ ಬಂದ ವಿಲಿಯಮ್ಸನ್(8) ಹಾಗೂ ಅಭಿಶೇಕ್ ಶರ್ಮಾ(8) ರನ್ಗಳಿಸಿ ವಿಕೆಟ್ ಒಪ್ಪಿಸಿದರು.ಆದರೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಹೋಲ್ಡರ್ 10 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಸಹಿತ 26 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಆರ್ಸಿಬಿ ಪರ ಚಹಾಲ್ 2 ವಿಕೆಟ್ ಪಡೆದರೆ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ ಹಾಗೂ ಉದಾನ ತಲಾ ಒಂದು ವಿಕೆಟ್ ಪಡೆದದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ತಂಡ ಸಂದೀಪ್ ಶರ್ಮಾ, ಹೋಲ್ಡರ್ ದಾಳಿಗೆ ಸಿಲುಕಿ ಕೇವಲ 120 ರನ್ಗಳಿಸಿತ್ತು. ಜೋಶ್ ಫಿಲಿಪ್ಪೆ 32 ರನ್ಗಳಿಸಿದ್ದೆ ತಂಡದ ಗರಿಷ್ಠ ಮೊತ್ತವಾಗಿತ್ತು.
ಹೈದರಾಬಾದ್ ಪರ ಸಂದೀಪ್ ಶರ್ಮಾ 20ಕ್ಕೆ 2, ಜೇಸನ್ ಹೋಲ್ಡರ್ 27ಕ್ಕೆ 2 ಎನ್ ನಟರಾಜನ್ 11ಕ್ಕೆ1, ನದೀಮ್ 35ಕ್ಕೆ 1, ರಶೀದ್ ಖಾನ್ 24ಕ್ಕೆ 1 ವಿಕೆಟ್ ಪಡೆದರು.