ಕೊಲಂಬೋ: ವಿಶ್ವಕಂಡ ಶ್ರೇಷ್ಠ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಅವರನ್ನು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ತಮಿಳು ಪ್ರಾಬಲ್ಯವಿರುವ ಉತ್ತರ ಪ್ರಾಂತ್ಯದ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಕ್ರಿಕೆಟ್ ಆಡಿ ನಿವೃತ್ತರಾಗಿರುವ ಮುರಳೀಧರನ್ ಅವರನ್ನು ಸ್ವತಃ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರೇ ಉತ್ತರ ಪ್ರಾಂತ್ಯಗಳ ರಾಜ್ಯಪಾಲ ಹುದ್ದೆಯನ್ನು ಅಲಂಕರಿಸುವಂತೆ ತಿಳಿಸಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಹಿಂದೆ ಹರಡಿತ್ತು.
ಆದರೆ ಈ ವಿಚಾರ ಬಹಿರಂಗವಾಗ್ತಿದ್ದಂತೆ ತಮಿಳಿಗರಿಂದ ವಿರೋಧ ವ್ಯಕ್ತವಾಗಿತ್ತು. ಗೋಟಬಯ ಹಾಗು ಮಹಿಂದಾ ರಾಜಪಕ್ಸ ಅಧಿಕಾರದಲ್ಲಿದ್ದ ಸಮಯದಲ್ಲಿ ತಮಿಳಿಗರ ಮೇಲೆ ದೌರ್ಜನ್ಯ ಎಸಗಿದ್ದರೂ ಮುತ್ತಯ್ಯ ಮುರಳೀಧರನ್ ಮಾತ್ರ ಸರ್ಕಾರದ ಪರ ಮಾತನಾಡುತ್ತಿದ್ದರು. ಈ ಕಾರಣದಿಂದ ಮುರಳೀಧರನ್ ಅವರನ್ನು ರಾಜ್ಯಪಾಲರಾಗಿ ಆಯ್ಕೆಯಾಗುವುದಕ್ಕೆ ತಮಿಳಿಗರು ವಿರೋಧಿಸಿದ್ದರು.
ಇದೀಗ ತಮಿಳರ ವಿರೋಧದ ನಡುವೆಯೂ ಮುತ್ತಯ್ಯ ಮುರಳೀಧರನ್ ಉತ್ತರ ಪ್ರಾಂತ್ಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.