ಸೌತಾಂಪ್ಟನ್: ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಗೆಲುವಿಗೆ ಕಾರಣರಾಗಿದ್ದ ಶಾನನ್ ಗೇಬ್ರಿಯೆಲ್ ಅವರನ್ನು ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಹಾಡಿ ಹೊಗಳಿದ್ದಾರೆ.
ಮೊದ ಮೊದಲು ರಿಸರ್ವ್ ಆಟಗಾರನಾಗಿ ತಂಡವನ್ನು ಸೇರಿಕೊಂಡ ಗೇಬ್ರಿಯಲ್, ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ 137 ರನ್ಗಳಿಗೆ ಪ್ರಮುಖ 9 ವಿಕೆಟ್ ತೆಗೆಯುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದರು. ಆ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪಂದ್ಯದ ನಂತರ ಮಾತನಾಡಿದ ಹೋಲ್ಡರ್ "ಗೇಬ್ರಿಯೆಲ್ ಈ ರೀತಿ ಸ್ಪೆಲ್ ಮಾಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಆತ ಒಬ್ಬ ಪ್ರತಿಭಾನ್ವಿತ ಹಾಗೂ ವಿಶಾಲ ಹೃದಯದ ಆಟಗಾರ. ಜೊತೆಗೆ ಆತ ಜೀವನದಲ್ಲಿ ತುಂಬಾ ಕಷ್ಟಗಳನ್ನು ಅನುಭವಿಸಿದ್ದಾನೆ" ಎಂದು ಹೇಳಿದರು.

ಸಂಪೂರ್ಣ ಆತ್ಮವಿಶ್ವಾಸದಿಂದ ಆಟದಲ್ಲಿ ಪಾಲ್ಗೊಂಡು ಯಶಸ್ಸಿನತ್ತ ಮುಖಮಾಡುತ್ತಾನೆ. ಆತನ ದೇಹ ಕೂಡ ಅವನ ಆಟಕ್ಕೆ ಸಹಕರಿಸುತ್ತದೆ. ಗೇಬ್ರಿಯಲ್ ಫಿಟ್ ಅಂಡ್ ಫೈನ್ ಆಟಗಾರ ಎಂದು ಹಾಡಿ ಹೊಗಳಿದ್ದಾರೆ.
ಚೇಸಿಂಗ್ ವೇಳೆ ಆರಂಭಿಕ ವಿಕೆಟ್ಗಳನ್ನು ಬೇಗ ಕಳೆದುಕೊಂಡಾಗಲು ಆತ್ಮ ವಿಶ್ವಾಸದಿಂದ 95 ರನ್ ಗಳಿಸಿ ಶತಕ ವಂಚಿತರಾದ ಬ್ಯಾಕ್ವುಡ್ ಆಟ ಕೂಡ ಗೆಲುವಿನಲ್ಲೇ ಪ್ರಮುಖ ಪಾತ್ರ ವಹಿಸಿದೆ ಎಂದು ಹೋಲ್ಡರ್ ತಿಳಿಸಿದರು.