ಡರ್ಬನ್: ದಕ್ಷಿಣ ಆಫ್ರಿಕಾ ಮಹಿಳೆಯರ ತಂಡ ತವರಿನಲ್ಲಿ ಪಾಕಿಸ್ತಾನ ವನಿತೆಯರ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನು ಒಂದು ಪಂದ್ಯವಿರುವಂತೆಯೇ ಗೆದ್ದುಕೊಂಡಿದೆ.
ಡರ್ಬನ್ನಲ್ಲಿ ಶನಿವಾರ ನಡೆದ 2ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 252 ರನ್ ಗಳಿಸಿತ್ತು. ಆರಂಭಿಕ ಬ್ಯಾಟರ್ ಲಿಜೆಲ್ಲೆ ಲೀ 47, ವೋಲ್ವಾರ್ಟ್ 27, ಸುನೆ ಲ್ಯೂಸ್ 32, ಮರೆಝಾನ್ನೆ ಕಾಪ್ ಅಜೇಯ 68 ರನ್ ಗಳಿಸಿದರು.
-
South Africa two from two in the ODIs:
— ICC (@ICC) January 23, 2021 " class="align-text-top noRightClick twitterSection" data="
South Africa win by 13 runs
Pakistan end on 239/8 after 50 overs
#SAvPAK | https://t.co/fhUSCs3LMw
📸@OfficialCSA pic.twitter.com/ZoGa37AI1m
">South Africa two from two in the ODIs:
— ICC (@ICC) January 23, 2021
South Africa win by 13 runs
Pakistan end on 239/8 after 50 overs
#SAvPAK | https://t.co/fhUSCs3LMw
📸@OfficialCSA pic.twitter.com/ZoGa37AI1mSouth Africa two from two in the ODIs:
— ICC (@ICC) January 23, 2021
South Africa win by 13 runs
Pakistan end on 239/8 after 50 overs
#SAvPAK | https://t.co/fhUSCs3LMw
📸@OfficialCSA pic.twitter.com/ZoGa37AI1m
ಪಾಕಿಸ್ತಾನ ಪರ ನಶ್ರ ಸಂದು 2, ದಿಯಾನ ಬೇಗ್ 2 , ಫಾತಿಮಾ ಸನಾ ಮತ್ತು ಸಾದಿಯಾ ಇಕ್ಬಾಲ್ ತಲಾ ಒಂದು ವಿಕೆಟ್ ಪಡೆದರು.
ಇನ್ನು 253 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ವನಿತಾ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 239 ರನ್ ಗಳಿಸಿ, 13 ರನ್ಗಳ ಸೋಲು ಕಂಡಿತು.
ಆಲ್ರೌಂಡರ್ ಆಲಿಯಾ ರಿಯಾಜ್ 81, ನಿಡಾ ದಾರ್ 51 ಹಾಗೂ ಒಮೈಮಾ ಸೊಹೈಲ್ 41 ರನ್ ಗಳಿಸಿ ಗೆಲುವಿಗಾಗಿ ನಡೆಸಿದ ಹೋರಾಟ ವಿಫಲವಾಯಿತು.
ದಕ್ಷಿಣ ಆಫ್ರಿಕಾ ಪರ ಅಯಬೊಂಗಾ ಕಾಕ 40ಕ್ಕೆ 4, ಮರಿಜಾನ್ನೆ ಕಾಪ್ 44ಕ್ಕೆ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಮೊದಲ ಪಂದ್ಯದಲ್ಲಿ 3 ರನ್ಗಳ ರೋಚಕ ಜಯ ಸಾಧಿಸಿದ್ದ ಹರಿಣ ಪಡೆ ಇದೀಗ ಈ ಪಂದ್ಯದ ಗೆಲುವಿನೊಂದಿಗೆ ಸರಣಿ ವಶಪಡಿಸಿಕೊಂಡಿದೆ.