ಪೋರ್ಟ್ ಎಲಿಜಬತ್: ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಮೂರನೇ ಟೆಸ್ಟ್ನಲ್ಲಿ ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿದೆ.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಬೆನ್ಸ್ಟೋಕ್ಸ್(120) ಹಾಗೂ ಒಲ್ಲಿ ಪೋಪ್(135*) ಅವರ ಭರ್ಜರಿ ಶತಕದ ನೆರವಿನಿಂದ 152 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 499 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು.
ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ 5 ವಿಕೆಟ್, ಕಗಿಸೋ ರಬಡಾ 2 ಆನ್ರಿಚ್ ನಾರ್ಟ್ಜ್ ತಲಾ ಒಂದು ವಿಕೆಟ್ ಪಡೆದರು.
499 ರನ್ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ನ ಯುವ ಸ್ಪಿನ್ನರ್ ಡೊಮೆನಿಕ್ ಬೆಸ್(5) ಹಾಗೂ ಬ್ರಾಡ್(3) ಬೌಲಿಂಗ್ ದಾಳಿಗೆ ಸಿಲುಕಿ 209ರನ್ ಗಳಿಗೆ ಆಲ್ಔಟ್ ಆಯಿತು. 63 ರನ್ಗಳಿಸಿದ ಕ್ವಿಂಟನ್ ಡಿ ಕಾಕ್ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇವರನ್ನು ಡೀನ್ ಎಲ್ಗರ್ 35 ರನ್ಗಳಿಸಿದರೆ, ಆ್ಯನ್ರಿಚ್ ನಾರ್ಟ್ಜ್ ಬರೋಬ್ಬರಿ 136 ಎಸೆತಗಳನ್ನು ಎದುರಿಸಿ ಕ್ರೀಸ್ನಲ್ಲಿ ಹೆಚ್ಚು ಸಮಯ ಕಳೆದರು. ಇವರು 18 ರನ್ಗಳಿಸಿ ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದರು.
ದಕ್ಷಿಣ ಆಫ್ರಿಕಾ 209ರನ್ಗಳಿಗೆ ಆಲೌಟ್ ಆಗುತ್ತಿದ್ದಂತೆ ಇಂಗ್ಲೆಂಡ್ ತಂಡ ಫಾಲೋಆನ್ ಏರಿತು. ದುರಾದೃಷ್ಟವೆಂದರೆ ಎರಡನೇ ಇನ್ನಿಂಗ್ಸ್ನಲ್ಲೂ ಹರಿಣ ಪಡೆ ಕೆಟ್ಟ ಆರಂಭ ಪಡೆದಿದ್ದು 44 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.