ETV Bharat / sports

ಗಂಗೂಲಿಯ 4 ರಾಷ್ಟ್ರಗಳ ಸೂಪರ್​ ಸಿರೀಸ್​ ಫ್ಲಾಪ್ ಆಗುತ್ತೆ: ಪಾಕ್​​​ ಮಾಜಿ ಕ್ರಿಕೆಟಿಗ - ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಲತೀಫ್​

ಗಂಗೂಲಿಯವರ ನಾಲ್ಕು ದೇಶಗಳ ಸೂಪರ್​ ಸಿರೀಸ್​ ಫ್ಲಾಫ್​ ಐಡಿಯಾ. ಇದು ಒಳ್ಳೆಯ ಯೋಜನೆಯಲ್ಲ ಎಂದು ಪಾಕಿಸ್ತಾನದ ರಶೀದ್​ ಲತೀಪ್​ ವಿರೋಧ ವ್ಯಕ್ತಪಡಿಸಿದ್ದಾರೆ.

Sourav Ganguly  four-nation Supe
Sourav Ganguly four-nation Supe
author img

By

Published : Dec 25, 2019, 8:12 PM IST

ಕರಾಚಿ: ಸೌರವ್​ ಗಂಗೂಲಿ ಅವರ 4 ರಾಷ್ಟ್ರಗಳ ಸೂಪರ್​ ಸಿರೀಸ್ ಫ್ಲಾಫ್​ ಐಡಿಯಾ ಎಂದು ಪಾಕಿಸ್ತಾನದ ಮಾಜಿ ವಿಕೆಟ್​ ಕೀಪರ್​ ರಶೀದ್​ ಲತೀಫ್​ ಟೀಕಿಸಿದ್ದಾರೆ.

ಆಸ್ಟ್ರೇಲಿಯಾ, ಇಂಗ್ಲೆಂಡ್​, ಭಾರತ ಹಾಗೂ ಮತ್ತೊಂದು ಟಾಪ್​ ತಂಡ ಒಳಗೊಂಡಂತೆ ಸೂಪರ್​ ಸಿರೀಸ್​​​ಅನ್ನು 2021ಕ್ಕೆ ಭಾರತದಲ್ಲಿ ಆಯೋಜಿಸಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಳೆದ ವಾರ ಕೋಲ್ಕತ್ತಾದಲ್ಲಿ ತಿಳಿಸಿದ್ದರು.

ಆದರೆ ಪಾಕ್​ ಮಾಜಿ ಆಟಗಾರ ಲತೀಫ್​ ಗಂಗೂಲಿ ಯೋಜನೆಯನ್ನು ಟೀಕಿಸಿದ್ದು, "ಇಂಥಹ ಸರಣಿಯನ್ನು ಆಯೋಜನೆ ಮಾಡುವುದರಿಂದ ಈ ನಾಲ್ಕು ತಂಡಗಳು ಜಗತ್ತಿನ ಉಳಿದ ತಂಡಗಳನ್ನು ಮೂಲೆಗುಂಪಾಗಿಸಲಿವೆ. ಇದೊಂದು ಒಳ್ಳೆಯ ಸುದ್ದಿಯಲ್ಲ. ನನ್ನ ಪ್ರಕಾರ ಕೆಲವು ವರ್ಷಗಳ ಹಿಂದೆ ಫ್ಲಾಪ್​​​ ಆದ ಬಿಗ್​ ತ್ರೀ ಸರಣಿಯ ಹಾಗೆ ಇದು ಕೂಡ ಫ್ಲಾಪ್​​​ ಆಗಲಿದೆ ಎಂದು ಲತೀಫ್​ ಹೇಳಿದ್ದಾರೆ.

ಈ ತಿಂಗಳ ಮೊದಲ ವಾರದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಹಾಗೂ ಖಜಾಂಚಿ ಅರುಣ್​ ಧುಮಾಲ್​ ಲಂಡನ್​ಗೆ ತೆರಳಿ ಇಸಿಬಿ ಅಧ್ಯಕ್ಷ ಕಾಲಿನ್ ಗ್ರೇವ್ಸ್​ ಮುಂದಾಳತ್ವದ ಸಭೆಯಲ್ಲಿ ಚತುಷ್ಕೋನ ಸರಣಿಯ ಬಗ್ಗೆ ಚರ್ಚಿಸಿ ಬಂದಿದ್ದರು.

ಈ ಚರ್ಚೆಯ ಬಳಿಕ ಇಸಿಬಿ ಒಂದು ಪ್ರಕಟಣೆ ಹೊರಡಿಸಿದ್ದು, "ನಾವು ಬೇರೆ ಕ್ರಿಕೆಟ್​ ಬೋರ್ಡ್​ಗಳ ನಾಯಕರ ಜೊತೆ ಸಭೆ ನಡೆಸಿ ಕ್ರಿಕೆಟ್​ನ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಅದೇ ರೀತಿ ಡಿಸೆಂಬರ್​ನಲ್ಲಿ ಬಿಸಿಸಿಐ ಜೊತೆ ನಡೆದ ಸಭೆಯಲ್ಲಿ ನಾಲ್ಕು ರಾಷ್ಟ್ರಗಳ ಪಂದ್ಯವಾಳಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಯೋಜನೆ ಅಭಿವೃದ್ಧಿಯಾಗಲಿದೆಯಾ ಎಂದು ಐಸಿಸಿ ಸದಸ್ಯರ ಜೊತೆ ಚರ್ಚಿಸಲು ನಾವು ಮುಕ್ತವಾಗಿ ಸಿದ್ಧರಿದ್ದೇವೆ" ಎಂದು ಇಸಿಬಿ ಗಂಗೂಲಿ ಯೋಜನೆಗೆ ಗ್ರೀನ್​ ಸಿಗ್ನಲ್​ ನೀಡಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.