ETV Bharat / sports

ಸೌರವ್​ ಗಂಗೂಲಿಗೆ 2ನೇ ಆ್ಯಂಜಿಯೋಪ್ಲಾಸ್ಟಿ, ಮತ್ತೆರಡು ಸ್ಟಂಟ್​ ಅಳವಡಿಕೆ - ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ

ಬುಧವಾರ ಸೌರವ್ ಗಂಗೂಲಿಗೆ ಸಣ್ಣ ಎದೆನೋವು ಕಾಣಿಸಿಕೊಂಡ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಅವರಿಗೆ ಎರಡನೇ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ.

ಸೌರವ್​ ಗಂಗೂಲಿಗೆ 2ನೇ ಆಂಜಿಯೋಪಾಸ್ಟಿ
ಸೌರವ್​ ಗಂಗೂಲಿಗೆ 2ನೇ ಆಂಜಿಯೋಪಾಸ್ಟಿ
author img

By

Published : Jan 28, 2021, 7:24 PM IST

Updated : Jan 28, 2021, 8:36 PM IST

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಎರಡನೇ ಬಾರಿಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾಗಿದ್ದು, ಅಪಧಮನಿಗಳಲ್ಲಿ ಎರಡು ಸ್ಟಂಟ್‌ಗಳನ್ನು ಸೇರಿಸಲಾಗಿದೆ.

ಜನವರಿಯ ಮೊದಲ ವಾರದಲ್ಲಿ ಗಂಗೂಲಿಗೆ ಲಘು ಹೃದಯಾಘಾತವಾಗಿತ್ತು. ನಂತರ ಅವರಿಗೆ ವುಡ್​ಲ್ಯಾಂಡ್ಸ್​ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ನಡೆಸಿ, ಸ್ಟಂಟ್ ಅಳವಡಿಸಿ ಜನವರಿ 6 ರಂದು ಡಿಸ್ಚಾರ್ಜ್​ ಮಾಡಲಾಗಿತ್ತು. ನಂತರ ಅಗತ್ಯಬಿದ್ದರೆ ಮತ್ತೊಂದು ಆ್ಯಂಜಿಯೋಪ್ಲಾಸ್ಟಿ ಮಾಡುವುದಾಗಿ ಮತ್ತು ಸ್ಟೆಂಟ್​ಗಳನ್ನು ಅಳವಡಿಸುವುದಾಗಿ ವುಡ್​ಲ್ಯಾಂಡ್ಸ್​ ಆಸ್ಪತ್ರೆ ವೈದ್ಯರು ಹೇಳಿದ್ದರು.

ಇಂದು ಬೆಳಿಗ್ಗೆ ಗಂಗೂಲಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ತಂಡದ ಹಿರಿಯ ವೈದ್ಯರು ಕೆಲವು ಪರೀಕ್ಷೆಗಳನ್ನು ಮಾಡಿದ ನಂತರ ಅವರ ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿರುವ ದಾದಾ: ವರದಿ ಬಂದ ನಂತರ ಸ್ಟಂಟ್ ಅಳವಡಿಕೆ ಬಗ್ಗೆ ನಿರ್ಧಾರ

Last Updated : Jan 28, 2021, 8:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.