ಹೈದರಾಬಾದ್: ಪಾಕಿಸ್ತಾನದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ದನೀಶ್ ಕನೇರಿಯಾ ಅವರನ್ನು ಪಾಕಿಸ್ತಾನ ಕ್ರಿಕೆಟಿಗರು ನಿಕೃಷ್ಟವಾಗಿ ಕಾಣುತ್ತಿದ್ದರು ಎಂಬ ವಿಚಾರವನ್ನು ಪಾಕ್ ತಂಡದ ಮಾಜಿ ನಾಯಕ ಅಲ್ಲಗೆಳೆದಿದ್ದಾರೆ.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ ತಾವು ಪಾಕಿಸ್ತಾನ ಕ್ರಿಕೆಟ್ ತಂಡದ ಪರ ಆಡುವಾಗ ತಮ್ಮನ್ನು ಒಬ್ಬ ಹಿಂದೂ ಎಂಬ ಕಾರಣಕ್ಕೆ ಗೌರವದಿಂದ ಕಾಣುತ್ತಿರಲಿಲ್ಲ, ಒಟ್ಟಿಗೆ ಊಟ ಮಾಡುತ್ತಿರಲಿಲ್ಲ ಎಂಬ ಅವರ ಹೇಳಿಕೆ ನೀಡಿ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೀಡು ಮಾಡಿತ್ತು. ಆದರೆ, ಈ ಮಾತನ್ನು ಒಪ್ಪದ ಇಂಜಮಾಮ್ ಉಲ್ ಹಕ್ ನೆರೆಯ ರಾಷ್ಟ್ರವಾದ ಭಾರತವನ್ನು ಉದಾಹರಣೆ ನೀಡಿ ಕ್ರಿಕೆಟ್ಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ 2004ರಲ್ಲಿ ಪಾಕಿಸ್ತಾನಕ್ಕೆ ಬಂದಿದ್ದಾಗ ನಾನು ನಾಯಕನಾಗಿದ್ದೆ. ಆ ಸಮಯದಲ್ಲಿ ಭಾರತೀಯರು ಪಾಕ್ನಲ್ಲಿ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಿದರೆ , ರೆಸ್ಟೋರೆಂಟ್ಗಳಲ್ಲಿ ಊಟ ಹಾಗೂ ಶಾಪಿಂಗ್ ಮಾಡಿದರೆ ಯಾರೊಬ್ಬರು ಹಣ ತೆಗೆದುಕೊಳ್ಳುತ್ತಿರಲಿಲ್ಲ. ಮತ್ತೆ ಮರುವರ್ಷ ನಾವು ಭಾರತಕ್ಕೆ ತೆರಳಿದಾಗ ಭಾರತೀಯರು ಸಹಾ ನಮ್ಮನ್ನು ಅದೇ ರೀತಿ ನೋಡಿಕೊಂಡರು. ನಮ್ಮನ್ನು ಅವರ ಅತಿಥಿಗಳಂತೆ ಭಾವಿಸುತ್ತಿದ್ದರು.
ಆ ಸಮಯದಲ್ಲಿ ಭಾರತೀಯರು ಮತ್ತು ಪಾಕಿಸ್ತಾನೀಯರ ನಡುವೆ ಉತ್ತಮ ಪ್ರೀತಿ ಬಾಂಧವ್ಯವಿತ್ತು. ಆದರೆ, ಕನೇರಿಯಾ ಅಂತಹ ಸಂದರ್ಭದಲ್ಲಿ ಧರ್ಮದ ವಿಚಾರವಾಗಿ ಮಾತನಾಡಿ ಪಾಕಿಸ್ತಾನಿಯರು ಸಣ್ಣ ಹೃದಯವುಳ್ಳ ಮನುಷ್ಯರು ಎಂದು ಟೀಕೆ ಮಾಡಿರುವುದನ್ನು ನಾನು ಒಪ್ಪುವುದಿಲ್ಲ, ಏಕೆಂದರೆ ಅವರು ನನ್ನ ನಾಯಕತ್ವದಲ್ಲಿ ಹೆಚ್ಚು ಪಂದ್ಯಗಳನ್ನಾಡಿದ್ದಾರೆ ಎಂದು ತಮ್ಮ ಯೂ ಟ್ಯೂಬ್ ಚಾನೆಲ್ನಲ್ಲಿ ಪಾಕ್ ಮಾಜಿ ನಾಯಕ ಹೇಳಿಕೊಂಡಿದ್ದಾರೆ.
ಪಾಕಿಸ್ತಾನ ಆಟಗಾರರು ನನ್ನ ಜೊತೆ ಒಟ್ಟಿಗೆ ಊಟ ಮಾಡುತ್ತಿರಲಿಲ್ಲ ಎಂಬ ಕನೇರಿಯಾ ಆರೋಪಕ್ಕೆ ಮಾತನಾಡಿರುವ ಅವರು, ನಾವು 2005ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ಕೋಲ್ಕತ್ತಾಗೆ ತೆರಳಿದ್ದೆ. ಆ ಸಂದರ್ಭದಲ್ಲಿ ಗಂಗೂಲಿ ರೆಸ್ಟೋರೆಂಟ್ ತೆರದಿದ್ದರು. ಅದನ್ನು ನಾನು ಹಾಗೂ ಸಚಿನ್ ಉದ್ಘಾಟನೆ ಮಾಡಿದ್ದೆವು. ನನಗಾಗಿ ಗಂಗೂಲಿ ತಮ್ಮ ರೆಸ್ಟೋರೆಂಟ್ನಿಂದ ಊಟ ಕಳುಹಿಸಿದ್ದರು.
ಇಷ್ಟೇ ಅಲ್ಲ ದುಬೈ, ಶಾರ್ಜಾದಂತಹ ರಾಷ್ಟ್ರಗಳಿಗೆ ಪ್ರವಾಸಕ್ಕೆ ತೆರಳಿದಾಗ ಭಾರತ ಹಾಗೂ ಪಾಕಿಸ್ತಾನ ಆಟಗಾರರು ಒಂದೇ ಹೋಟೆಲ್ನಲ್ಲಿ ತಂಗುತ್ತಿದ್ದೆವು. ಆ ಸಂದರ್ಭದಲ್ಲಿ ಎರಡೂ ತಂಡಗಳ ಆಟಗಾರರು ಕೊಠಡಿಗೆ ದಾವಿಸಿ ಮಾತನಾಡುತ್ತಿದ್ದೆವು, ಎಲ್ಲರೂ ಒಟ್ಟಿಗೆ ಊಟ ಮಾಡುತ್ತಾ ತಮಾಷೆ ಮಾಡುತ್ತಿದ್ದೆವು. ಆದರೆ, ಆ ಸಂದರ್ಭದಲ್ಲಿ ಎರಡು ಕಡೆಗಳಿಂದ ಕನೇರಿಯಾ ಹೇಳಿದ ಯಾವುದೆ ಘಟನೆ ನಡೆದಿಲ್ಲ ಎಂದು ಇಂಜಮಮ್ ತಿಳಿಸಿದ್ದಾರೆ.
- " class="align-text-top noRightClick twitterSection" data="">