ಮುಂಬೈ: ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ 2003ರ ವಿಶ್ವಕಪ್ ಸಮಯದಲ್ಲಿ ತಮ್ಮ ತಂಡದಲ್ಲಿರಬೇಕಿತ್ತು ಎಂದು ಹೇಳಿದ್ದಾರೆ.
ಬಿಸಿಸಿಐ ಲೈವ್ ಪೇಜ್ನಲ್ಲಿ ಮಯಾಂಕ್ ಅಗರ್ವಾಲ್ ನಡೆಸಿಕೊಟ್ಟ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಗೂಲಿ, ತಮ್ಮ ನಾಯಕತ್ವದ ದಿನಗಳು, ಐತಿಹಾಸಿಕ ನಾಟ್ವೆಸ್ಟ್ ಸರಣಿ ಜಯ ಸೇರಿದಂತೆ ಹಲವಾರು ವಿಷಯಗಳನ್ನು ಹಂಚಿಕೊಂಡರು. ಹಾಗೆಯೇ 2003ರ ವಿಶ್ವಕಪ್ ತಂಡದಲ್ಲಿ ಪ್ರಸ್ತುತ ತಂಡದ ಯಾವ 3 ಆಟಗಾರರನ್ನು ಆಯ್ಕೆ ಮಾಡುತ್ತೀರಿ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ದಾದಾ ಈ ಮೂವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಬುಮ್ರಾ ಹೆಸರನ್ನು ದಾದಾ ಹೇಳಿದ್ದಾರೆ. ರೋಹಿತ್ ಶರ್ಮಾರಿಗೆ ಆರಂಭಿಕ ಸ್ಥಾನ ನೀಡಿ, ನಾನು ಮೂರನೇ ಕ್ರಮಾಂದಲ್ಲಿ ಆಡುತ್ತಿದ್ದೆ, ವಿರಾಟ್ ಅವರನ್ನು ಮಧ್ಯಮ ಕ್ರಮಾಂದಲ್ಲಿ ಆಡಿಸುತ್ತಿದ್ದೆ. ಇನ್ನು ಅಂದಿನ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದರಿಂದ ಬುಮ್ರಾ ಬೌಲಿಂಗ್ ಅದ್ಭುತವಾಗಿರುತ್ತಿತ್ತು ಎಂದು ಈ ಆಯ್ಕೆಗೆ ಕಾರಣವನ್ನೂ ನೀಡಿದ್ದಾರೆ.
ಇನ್ನು ಧೋನಿಯನ್ನು ಕೂಡ ಆಯ್ಕೆ ಮಾಡುತ್ತಿದ್ದೆ, ಆದರೆ ನೀವು ನನಗೆ ಕೇವಲ ಮೂರು ಆಯ್ಕೆಗಳನ್ನು ನೀಡಿದ್ದೀರಿ. ಹಾಗಾಗಿ ರಾಹುಲ್ನನ್ನು ವಿಕೆಟ್ ಕೀಪರ್ ಆಗಿಯೇ ಆಡಿಸುತ್ತೇನೆ ಎಂದಿದ್ದಾರೆ. ಹಾಗೆಯೇ ರೋಹಿತ್ ಅವರನ್ನು ಆರಂಭಿಕನಾಗಿ ಆಡಿಸುತ್ತೇನೆಂದು ಹೇಳಿರುವುದಕ್ಕೆ ಖಂಡಿತ ಶೋ ಮುಗಿದ ನಂತರ ಸೆಹ್ವಾಗ್ ನನಗೆ ಕರೆ ಮಾಡಿ ನನ್ನನ್ನ ಪ್ರಶ್ನಿಸಲಿದ್ದಾರೆ ಎಂದು ದಾದಾ ಉತ್ತರಿಸಿದ್ದಾರೆ.