ಮುಂಬೈ: ಕ್ರಿಕೆಟ್ ಆಡಳಿತವನ್ನು ಭ್ರಷ್ಟಾಚಾರ ಮುಕ್ತವಾಗಿ ನಡೆಸಲು ಎಷ್ಟೇ ಪ್ರಯತ್ನಪಟ್ಟರೂ ಬುಕ್ಕಿಗಳು ನೀಡುವ ಹಣದಾಸೆಗೆ ಕೆಲವು ಕ್ರಿಕೆಟಿಗರು ಒಪ್ಪಿ ಕ್ರಿಕೆಟ್ಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಅದಕ್ಕಾಗಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಭ್ರಷ್ಟಾಚಾರ ಮುಕ್ತ ಕ್ರಿಕೆಟ್ಗಾಗಿ ಬಲವಾದ ನೀತಿ,ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.
ಕೆಪಿಎಲ್ನಲ್ಲಿ ಹಲವು ಕ್ರಿಕೆಟಿಗರು ಬುಕ್ಕಿಗಳಿಂದ ಹಣ ಪಡೆದು ಬಂಧಿತರಾದ ಮೇಲೆ ಕೆಪಿಎಲ್ ನಿಷೇಧಿಸಬೇಕು ಎಂಬ ಕೂಗು ಕೇಳಿ ಬಂದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದಾದಾ, ಕೆಪಿಎಲ್ನಲ್ಲಿ ಇಂತಹ ಘಟನೆ ಮತ್ತೊಮ್ಮೆ ಮರುಕಳಿಸುವುದಿಲ್ಲ. ಪ್ರಸ್ತುತ ಮುಂದಿನ ಆವೃತ್ತಿಯನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
-
BCCI President Sourav Ganguly after Board's Annual General Meeting in Mumbai: We've to get the anti-corruption system right. It's hard to stop tournaments based on who's being approached. KPL(Karnataka Premier League) is on hold now.If this doesn't stop,we'll have to do something pic.twitter.com/xhXkn01fmA
— ANI (@ANI) December 1, 2019 " class="align-text-top noRightClick twitterSection" data="
">BCCI President Sourav Ganguly after Board's Annual General Meeting in Mumbai: We've to get the anti-corruption system right. It's hard to stop tournaments based on who's being approached. KPL(Karnataka Premier League) is on hold now.If this doesn't stop,we'll have to do something pic.twitter.com/xhXkn01fmA
— ANI (@ANI) December 1, 2019BCCI President Sourav Ganguly after Board's Annual General Meeting in Mumbai: We've to get the anti-corruption system right. It's hard to stop tournaments based on who's being approached. KPL(Karnataka Premier League) is on hold now.If this doesn't stop,we'll have to do something pic.twitter.com/xhXkn01fmA
— ANI (@ANI) December 1, 2019
ನಾವು ಭ್ರಷ್ಟಾಚಾರ ನೀತಿಯನ್ನು ಬಲಪಡಿಸಬೇಕು. ಯಾರೋ ಹಣದ ಆಮಿಷ ನೀಡುತ್ತಾರೆಂಬ ಕಾರಣಕ್ಕೆ ಒಂದು ಟೂರ್ನಮೆಂಟ್ ನಿಲ್ಲಿಸುವುದು ತುಂಬಾ ಕಠಿಣ ನಿರ್ಧಾರ. ಸದ್ಯಕ್ಕೆ ಕೆಪಿಎಲ್ ಸ್ಥಗಿತಗೊಂಡಿದೆ ಅಷ್ಟೇ. ಆದರೆ ಶಾಶ್ವತವಾಗಿ ನಿಲ್ಲುವುದಿಲ್ಲ. ಭ್ರಷ್ಟಾಚಾರ ನಿಯಂತ್ರಣಕ್ಕೆ ನಾವೇನಾದರೂ ಮಾಡಬೇಕಿದೆ ಎಂದು ಗಂಗೂಲಿ ತಿಳಿಸಿದ್ರು.
2018ರ ಆವೃತ್ತಿಯಲ್ಲಿ, ಬಳ್ಳಾರಿ ಟಸ್ಕರ್ಸ್, ಬೆಳಗಾವಿ ಹಾಗೂ ಬೆಂಗಳೂರು ಫ್ರಾಂಚೈಸಿ ಆಟಗಾರರು ಹಾಗೂ ಕೋಚ್ ಮೋಸದಾಟಕ್ಕೆ ಹಣ ಪಡೆದಿರುವುದು ಖಚಿತವಾದ ಬೆನ್ನಲ್ಲೇ ಕೆಲವು ಆಟಗಾರರನ್ನು ಬೆಂಗಳೂರು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದರು. ನಂತರ ತನಿಖೆ ಮುಂದುವರಿದಂತೆ ಹಲವು ಆಟಗಾರರು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಕೆಪಿಎಲ್ನಲ್ಲಿ ಪಾಲ್ಗೊಂಡಿದ್ದ ಎಲ್ಲಾ ಆಟಗಾರರಿಗೂ ಬೆಂಗಳೂರು ಪೊಲೀಸರು ನೋಟೀಸ್ ಜಾರಿ ಮಾಡಿದ್ದರು.