ETV Bharat / sports

ಮುಂದಿನ ಐಪಿಎಲ್​ ಭಾರತದಲ್ಲೇ ಎಂದ ದಾದಾ ಮೆಗಾ ಆ್ಯಕ್ಷನ್​ ಬಗ್ಗೆ ಹೇಳಿದ್ದೇನು?

ಐಪಿಎಲ್​ ಆಯೋಜನೆಗೊಳ್ಳುವ ವೇಳೆಗೆ ಕೋವಿಡ್-19 ವ್ಯಾಕ್ಸಿನ್​ ಬರುವ ಸಾಧ್ಯತೆ ಇದೆ. ಹಾಗಾಗಿ 2021ರ ಐಪಿಎಲ್​ಅನ್ನು ಭಾರತದಲ್ಲೇ ಆಯೋಜನೆ ಮಾಡಬಹುದು ಎಂದು ಬಿಸಿಸಿಐ ಬಾಸ್​ ಸೌರವ್​ ಗಂಗೂಲಿ ಹೇಳಿದ್ದಾರೆ.

author img

By

Published : Nov 4, 2020, 9:50 PM IST

ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 2021ರ ಐಪಿಎಲ್​ ಭಾರತದಲ್ಲೇ ನಡೆಸುವ ವಿಶ್ವಾಸ ಹೊಂದಿದ್ದಾರೆ. ಆದರೆ ಈ ವರ್ಷ ನಡೆಯಬೇಕಿದ್ದ ಮೆಗಾ ಐಪಿಎಲ್​ ಆ್ಯಕ್ಷನ್​ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ದಾದಾ ತಿಳಿಸಿದ್ದಾರೆ.

ಐಪಿಎಲ್​ ಆಯೋಜನೆಗೊಳ್ಳುವ ವೇಳೆಗೆ ಕೋವಿಡ್-19 ವ್ಯಾಕ್ಸಿನ್​ ಬರುವ ಸಾಧ್ಯತೆ ಇದೆ. ಹಾಗಾಗಿ 2021ರ ಐಪಿಎಲ್​ಅನ್ನು ಭಾರತದಲ್ಲೇ ಆಯೋಜನೆ ಮಾಡಬಹುದು ಎಂದು ಬಿಸಿಸಿಐ ಬಾಸ್​ ಸೌರವ್​ ಗಂಗೂಲಿ ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗಿದ್ದ ಕಾರಣ ಪ್ರಸ್ತುತ 13ನೇ ಐಪಿಎಲ್ ಆವೃತ್ತಿಯನ್ನು ಯುಎಇನಲ್ಲಿ ಆಯೋಜಿಸಲಾಗಿದೆ. ಈ ಟೂರ್ನಿ ಮಾರ್ಚ್​ 29ರಂದೇ ಆರಂಭವಾಗಬೇಕಿತ್ತು. ಆದರೆ ಕೋವಿಡ್ ಕಾರಣ ಬಿಸಿಸಿಐನಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

"2021ರ ಆವೃತ್ತಿ ವೇಳೆಗೆ ದೇಶದಲ್ಲಿ ಕೋವಿಡ್​-19 ವ್ಯಾಕ್ಸಿನ್ ಬಾರದಿದ್ದರೆ ಮುಂದಿನ ಆವೃತ್ತಿಗೂ ಯುಎಇ ಮತ್ತೊಂದು ಆಯ್ಕೆಯಾಗಿ ಉಳಿಯಲಿದೆ" ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಮೆಗಾ ಆ್ಯಕ್ಷನ್​ ಬಗ್ಗೆ ಮಾತನಾಡಿ, ಚೆನ್ನೈ ಸೂಪರ್​ ಕಿಂಗ್ಸ್​​​ನಂತಹ ತಂಡ ಇಡೀ ತಂಡವನ್ನೇ ಬದಲಾವಣೆ ಮಾಡಲು ಬಯಸಿದೆ. ಆದರೆ ಸಂಪೂರ್ಣ ಪ್ರಮಾಣದ ಹರಾಜು ಪ್ರಕ್ರಿಯೆ ನಡೆಸಬೇಕೆ ಅಥವಾ ಐಪಿಎಲ್​ಗೂ ಮುನ್ನ ಮಿನಿ ಹರಾಜು ಆಯೋಜನೆ ಮಾಡಬೇಕೆ ಎಂಬುದರ ಸ್ಪಷ್ಟನೆಗಾಗಿ ಇನ್ನಷ್ಟು ದಿನ ಕಾಯಬೇಕಿದೆ ಎಂದು ದಾದಾ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.