ಡ್ಯುನೇಡಿನ್(ನ್ಯೂಜಿಲ್ಯಾಂಡ್): ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ ಮಹಿಳಾ ಸೂಪರ್ ಸ್ಮ್ಯಾಸ್ ಟಿ20 ಟೂರ್ನಿಯಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದ್ದಾರೆ.
-
1 2 3 4 . 4 . . 1 4 4 6 6 1 2 1 1 . 1 4 6 6 4 . 4 1 6 6 1 6 . 6 . 2 1 6 4 4
— ICC (@ICC) January 14, 2021 " class="align-text-top noRightClick twitterSection" data="
The No.1 T20I all-rounder, Sophie Devine, smashed a 38-ball 108* for Wellington Blaze, setting a new record of the fastest women's T20 century 💥
📸 @SuperSmashNZ pic.twitter.com/yoAwOoqGDi
">1 2 3 4 . 4 . . 1 4 4 6 6 1 2 1 1 . 1 4 6 6 4 . 4 1 6 6 1 6 . 6 . 2 1 6 4 4
— ICC (@ICC) January 14, 2021
The No.1 T20I all-rounder, Sophie Devine, smashed a 38-ball 108* for Wellington Blaze, setting a new record of the fastest women's T20 century 💥
📸 @SuperSmashNZ pic.twitter.com/yoAwOoqGDi1 2 3 4 . 4 . . 1 4 4 6 6 1 2 1 1 . 1 4 6 6 4 . 4 1 6 6 1 6 . 6 . 2 1 6 4 4
— ICC (@ICC) January 14, 2021
The No.1 T20I all-rounder, Sophie Devine, smashed a 38-ball 108* for Wellington Blaze, setting a new record of the fastest women's T20 century 💥
📸 @SuperSmashNZ pic.twitter.com/yoAwOoqGDi
14 ದಿನಗಳ ಕ್ವಾರಂಟೈನ್ ಮುಗಿಸಿದ 4 ದಿನಗಳಲ್ಲಿ ಸೋಫಿ ಡಿವೈನ್ ಈ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಗುರುವಾರ ಮಹಿಳೆಯರ ಸೂಪರ್ಸ್ಮ್ಯಾಶ್ ಕ್ರಿಕೆಟ್ ಟೂರ್ನಿಯಲ್ಲಿ ಒಟಾಗೊ ವುಮೆನ್ಸ್ ತಂಡದ ವಿರುದ್ಧ ಅವರು ಈ ಸಾಧನೆ ಮಾಡಿದರು. 38 ಎಸೆತಗಳಲ್ಲಿ ಅಜೇಯ 108 ರನ್ಗಳಿಸಿದ ವೆಲ್ಲಿಂಗ್ಟನ್ ಬ್ಯಾಟರ್ ಕೇವಲ 36 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಒಟ್ಟಾರೆ ಇವರ ಇನ್ನಿಂಗ್ಸ್ನಲ್ಲಿ 9 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿ ಸೇರಿದ್ದವು.
ಡಿವೈನ್ ಸ್ಫೋಟಕ ಶತಕದಿಂದ ಒಟಾಗೋ ನೀಡಿದ 129 ರನ್ಗಳ ಟಾರ್ಗೆಟ್ ಅನ್ನು ವೆಲ್ಲಿಂಗ್ಟನ್ ಬ್ಲೇಝ್ ಯಾವುದೇ ವಿಕೆಟ್ ನಷ್ಟವಿಲ್ಲದೆ 8.4 ಓವರ್ಗಳಲ್ಲಿ ತಲುಪಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಡಿವೈನ್ಗೂ ಮೊದಲು ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್ ಅವರ ಹೆಸರಿನಲ್ಲಿತ್ತು. ಡಾಟಿನ್ 2010ರ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ ಶತಕ ಬಾರಿಸಿ ವಿಶ್ವದಾಖಲೆ ಬರೆದಿದ್ದರು.
ಇದನ್ನೂ ಓದಿ: ಕೇರಳ ಪರ ಶತಕ ಸಿಡಿಸಿದ ಅಜರುದ್ದೀನ್ಗೆ ಬಂಪರ್: 1 ರನ್ಗೆ 1,000 ರೂ.ನಂತೆ ಬಹುಮಾನ!