ಕೊಲೊಂಬೋ: ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್ ಯೋಜನೆಯಂತೆ ನಡೆಯುವುದು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಉಪಾಧ್ಯಕ್ಷ ರವಿನ್ ವಿಕ್ರಮರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರದಿಯ ಪ್ರಕಾರ, ಎಸ್‌ಎಲ್‌ಸಿ ಈಗ ಟೂರ್ನಮೆಂಟ್ಗಾಗಿ ಸಂಘಟಕರನ್ನು ಕಂಡುಹಿಡಿದಿದೆ. ಎಸ್‌ಎಲ್‌ಸಿ ಈ ಹಿಂದೆ ಪಾಕಿಸ್ತಾನ ಸೂಪರ್ ಲೀಗ್ ಪ್ರೊಡಕ್ಷನ್ ಹಾಗೂ ಬ್ರಾಡ್ಕಾಸ್ಟ್ನಲ್ಲಿ ಭಾಗಿಯಾಗಿದ್ದ ದುಬೈ ಮೂಲದ ಇನ್ನೋವೇಟಿವ್ ಪ್ರೊಡಕ್ಷನ್ ಗ್ರೂಪ್ನೊಂದಿಗೆ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ತಿಳಿದುಬಂದಿದೆ.
ಒಪ್ಪಂದದ ಷರತ್ತುಗಳ ಪ್ರಕಾರ ಎಲ್ಪಿಎಲ್ನ 5 ತಂಡಗಳಿಗೆ ಫ್ರಾಂಚೈಸಿಗಳನ್ನು ಹುಡುಕುವುದು ಮತ್ತು ಸುರಕ್ಷಿತ ಪ್ರಾಯೋಜಕರನ್ನು ಹುಡುಕಲು ಇನ್ನೋವೇಟಿವ್ ಪ್ರೊಡಕ್ಷನ್ ಗ್ರೂಪ್ ಕಾರ್ಯನಿರತವಾಗಿದೆ. ಅಧಿಕಾರಿಗಳ ಪ್ರಕಾರ ಈಗಾಗಲೇ 70 ವಿದೇಶಿ ಆಟಗಾರರು ಎಲ್ಪಿಎಲ್ನ ಭಾಗವಾಗಲು ಬಯಸಿದ್ದಾರೆ ಎಂದು ತಿಳಿದುಬಂದಿದೆ.
ಟೂರ್ನಮೆಂಟ್ ಆಗಸ್ಟ್ 28 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 20 ರಂದು ಮುಕ್ತಾಯಗೊಳ್ಳಲಿದೆ.
ನಾವು ಆಗಸ್ಟ್ 28ರಂದು ಪ್ರಾರಂಭಿಸಲು ಸಿದ್ಧರಿದ್ದೇವೆ. ಆದರೆ ಅದಕ್ಕೂ ಮೊದಲ ಆರೋಗ್ಯ ಇಲಾಖೆಯಿಂದ ಕೆಲವು ಮಾರ್ಗಸೂಚಿಗಳನ್ನು ನಾವು ಪಡೆಯಬೇಕಿದೆ ಎಂದು ವಿಕ್ರಮರತ್ನ ತಿಳಿಸಿದ್ದಾರೆ.
ಆಗಸ್ಟ್ 13ರಂದು ನಮಗೆ ಮಾರ್ಗ ಸೂಚಿಗಳನ್ನು ಆರೋಗ್ಯ ಇಲಾಖೆ ನೀಡಲಿದೆ. ನಾವು ಆರೋಗ್ಯ ಇಲಾಖೆಯ ಅಧಿಕಾರಿಗೊಳೊಂದಿಗೆ ಒಂದೆರಡು ಸಭೆ ನಡೆಸಿದ್ದೇವೆ. ವಿದೇಶಿ ಆಟಗಾರರ 7 ದಿನಗಳಿಗೆ ವಿಶೇಷ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದಾರೆ. ಪ್ರವಾಸಿಗರು 7 ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ. ಈ ಸಮಯದಲ್ಲಿ ಅವರ ಚಲನವಲನಗಳನ್ನು ನಿರ್ಬಂಧಿಸಿಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಕೊಲೊಂಬೊ, ಕ್ಯಾಂಡಿ, ಗ್ಯಾಲೆ, ಡಂಬುಲ್ಲಾ ಮತ್ತು ಜಾಫ್ನಾವನ್ನು ನಗರ ಮೂಲದ ಐದು ಪ್ರಾಂಚೈಸಿಗಳಿರಲಿವೆ. ಆದರೆ ಇನ್ನು ಫ್ರಾಂಚೈಸಿಗಳನ್ನು ಅಂತಿಮ ಮಾಡಿಲ್ಲವೆಂದು ತಿಳಿದುಬಂದಿದೆ.