ನವದೆಹಲಿ : ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ ನಡುವಿನ 3ನೇ ಪಂದ್ಯದ ನಾಲ್ಕನೇ ದಿನ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರ ಒಂದು ಗುಂಪು ಸಿರಾಜ್ರನ್ನು 'ಬ್ರೌನ್ ಡಾನ್' ಮತ್ತು 'ಬಿಗ್ ಮಂಕಿ' ಎಂದು ಕರೆದು ನಿಂದಿಸಿದ್ದಾರೆ ಎಂದು ಬಿಸಿಸಿಐ ಆರೋಪಿಸಿದೆ.
ಮೊಹಮ್ಮದ್ ಸಿರಾಜ್ ಮತ್ತು ತಂಡದ ಹಿರಿಯ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಅವಾಚ್ಯ ಪದಗಳಿಂದ ಕುಡಿದ ಮತ್ತಿನಲ್ಲಿದ್ದ ಪ್ರೇಕ್ಷಕರ ಗುಂಪೊಂದು ನಿಂದಿಸಿದೆ ಎಂದು ಬಿಸಿಸಿಐ ಅಧಿಕಾರಿಗಳು ಮ್ಯಾಚ್ ರೆಫ್ರಿ ಡೇವಿಡ್ ಬೂನ್ಗೆ ಶನಿವಾರ ವರದಿ ಮಾಡಿತ್ತು. ಆದರೆ, ಭಾನುವಾರ ಕೂಡ ತಮ್ಮ ಚಾಳಿ ಬಿಡದ ಕೆಲ ಪ್ರೇಕ್ಷಕರ ಗುಂಪು ಮತ್ತೆ ಸಿರಾಜ್ ಫೀಲ್ಡಿಂಗ್ ಮಾಡುವ ವೇಳೆ ಜನಾಂಗೀಯ ನಿಂದನೆ ಮಾಡಿದೆ.
"ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ತಮ್ಮನ್ನು ಬ್ರೌನ್ ಡಾಗ್, ಬಿಗ್ ಮಂಕಿ ಎಂದು ಕರೆದಿದ್ದಾರೆಂದು ಸಿರಾಜ್ ಆರೋಪಿಸಿದ್ದಾರೆ. ಈ ರೀತಿ ಆಟಗಾರರನ್ನು ಸಂಬೋಧಿಸುವುದು ಜನಾಂಗೀಯ ನಿಂದನೆಯಾಗಿದೆ. ತಕ್ಷಣ ಈ ವಿಚಾರವನ್ನು ಮೈದಾನದ ಅಂಪೈರ್ಗಳ ಗಮನಕ್ಕೆ ತರಲಾಯಿತು. ಆ ಗುಂಪು ನಿರಂತರವಾಗಿ ಬುಮ್ರಾರನ್ನು ಕೂಡ ನಿಂದಿಸುತ್ತಿತ್ತು" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನು ಓದಿ:ಇದು ನಾಚಿಕೆಗೇಡು, ನನ್ನ ಜೀವನದಲ್ಲಿ ಕಾಡುವ ಘಟನೆ.. ಜನಾಂಗೀಯ ನಿಂದನೆ ಬಗ್ಗೆ ಲ್ಯಾಂಗರ್ ಕಿಡಿ
ಆಟಗಾರರು ಪಂದ್ಯದ ಮಧ್ಯೆ ಈ ವಿಚಾರವನ್ನು ತಂದು ಪಂದ್ಯದ ಮೇಲೆ ತಮ್ಮ ಗಮನವನ್ನು ಕಳೆದುಕೊಳ್ಳಲು ಬಯಸಿರಲಿಲ್ಲ. ನಾವು ಪಂದ್ಯ ಮುಗಿದ ಮೇಲೆ ವರದಿ ಮಾಡಬೇಕೆಂದಿದ್ದೆವು. ಆದರೆ, ಅಂಪೈರ್ಗಳೇ ಇಂತಹ ಘಟನೆ ಯಾವುದೇ ಸಂದರ್ಭದಲ್ಲಿ ನಡೆದರೂ ನಮಗೆ ವರದಿ ಮಾಡಿ ಎಂದು ತಿಳಿಸಿದ್ದರು. ಹಾಗಾಗಿ, ನಮ್ಮ ಆಟಗಾರರು ತಕ್ಷಣ ವರದಿ ಮಾಡಿದರು ಎಂದು ಆ ಅಧಿಕಾರಿ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಖಂಡಿತಾ ಆ ವ್ಯಕ್ತಿಗಳು ಕ್ಷಮೆಗೆ ಅರ್ಹರಲ್ಲ ಎಂದಿದೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮಾತು ನೀಡಿದೆ. ಈ ಘಟನೆ ನಂತರ ನ್ಯೂಸ್ ಸೌತ್ ವೇಲ್ಸ್ ಪೊಲೀಸರು ಆ ಪ್ರೇಕ್ಷಕರನ್ನು ಮೈದಾನದಿಂದ ಹೊರ ಕರೆದೊಯ್ದು, ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ನೀವು ಆಟಗಾರರಿಗೆ ಗೌರವ ಕೊಡದಿದ್ರೆ ಮೈದಾನಕ್ಕೆ ಬರಬೇಡಿ: ಇರ್ಫಾನ್ ಪಠಾಣ್
ಇದನ್ನು ಓದಿ:ಹಿಂದೆಯೂ ಸಿಡ್ನಿ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಅನುಭವಿಸಿದ್ದೇವೆ: ರವಿಚಂದ್ರನ್ ಅಶ್ವಿನ್