ETV Bharat / sports

ನ್ಯೂಜಿಲ್ಯಾಂಡ್​ ಎ ವಿರುದ್ಧ ಮತ್ತೊಂದು ಶತಕ ಸಿಡಿಸಿದ ಶುಬ್ಮನ್​ ಗಿಲ್​

ಮೊದಲ ಅನಧಿಕೃತ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 83, ಎರಡನೇ ಇನ್ನಿಂಗ್ಸ್​ನಲ್ಲಿ 204 ರನ್‌ಗಳಿಸಿ ಮಿಂಚಿದ್ದ ಶುಬ್ಮನ್​ ಗಿಲ್​, ಎರಡನೇ ಪಂದ್ಯದಲ್ಲೂ ಶತಕ ಸಿಡಿಸಿ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರಿಸಿದ್ದಾರೆ.

Shubman Gill hit century
ಶುಬ್ಮನ್​ ಗಿಲ್​ ಶತಕ
author img

By

Published : Feb 9, 2020, 5:14 PM IST

ಲಿಂಕಾನ್​: ಭಾರತ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ನ್ಯೂಜಿಲ್ಯಾಂಡ್​ ಎ ವಿರುದ್ಧ ಆಕರ್ಷಕ ದ್ವಿಶತಕ ಸಿಡಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದ ಯುವ ಆಟಗಾರ ಇದೀಗ ಎರಡನೇ ಅನಧಿಕೃತ ಟೆಸ್ಟ್​ನಲ್ಲೂ ಶತಕ ದಾಖಲಿಸಿ ಸಂಭ್ರಮಿಸಿದ್ದಾರೆ.

ಆರಂಭಿಕನಾಗಿ ಕಣಕ್ಕಿಳಿದ ಶುಬ್ಮನ್​ ಗಿಲ್​ 153 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ 107 ರನ್​ಗಳಿಸಿದ್ದಾರೆ. ಮತ್ತೊಬ್ಬ ಆರಂಭಿಕ ಬ್ಯಾಟ್ಸ್​ಮನ್​ ಹನುಮ ವಿಹಾರಿ 59 ರನ್​ಗಳಿಸಿ ಔಟಾದರು. ಚೇತೇಶ್ವರ್​ ಪೂಜಾರ 52 ರನ್​ಗಳಿಸಿ ಗಿಲ್ ಜೊತೆಗೆ 4ನೇ ದಿನಕ್ಕೆ ಆಟವನ್ನು ಕಾಯ್ದಿರಿಸಿಕೊಂಡಿದ್ದಾರೆ. ಒಟ್ಟಾರೆ ಭಾರತ ತಂಡ 1 ವಿಕೆಟ್​ ನಷ್ಟಕ್ಕೆ 234 ರನ್​ಗಳಿಸಿದೆ.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ನ್ಯೂಜಿಲ್ಯಾಂಡ್​ ಎ ತಂಡ, ಡೇರಿಲ್​ ಮಿಚೆಲ್​ (103) ಶತಕ ಹಾಗೂ ಗ್ಲೇನ್​ ಫಿಲಿಪ್ಸ್​(65) ಅವರ ಅರ್ಧಶತಕದ ನೆರವಿನಿಂದ 9 ವಿಕೆಟ್​ ಕಳೆದುಕೊಂಡು ಡಿಕ್ಲೇರ್​ ಘೋಷಿಸಿತು.

ಭಾರತದ ಪರ ಮೊಹಮ್ಮದ್​ ಸಿರಾಜ್​ 2, ಸಂದೀಪ್​ ವಾರಿಯರ್​ 2, ರವಿಚಂದ್ರನ್​ ಅಶ್ವಿನ್​ 2, ಅವೇಶ್​ ಖಾನ್​ 2 ಹಾಗೂ ಶಾಬಾಜ್​ ನದೀಮ್​ ಒಂದು ವಿಕೆಟ್​ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.