ಮುಂಬೈ: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್ ಮನೆಯಲ್ಲೇ ತಮ್ಮ ದಿನಗಳನ್ನ ಕಳೆಯುತ್ತಿದ್ದು, ಇದೇ ವೇಳೇ ಮಹೇಂದ್ರ ಸಿಂಗ್ ಧೋನಿ ಕುರಿತು ಗುಣಗಾನ ಮಾಡಿ ಅವರು ಒಬ್ಬ ನಿಜವಾದ ನಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ "ಕೂಲ್, ಶಾಂತ ಸ್ವಭಾವ, ಸ್ಥಿರ ಮತ್ತು ನಿಜವಾದ ನಾಯಕ" ಎಂದು ಅಯ್ಯರ್ ಹೇಳಿದರು. ಅವರ ಆಟ ನನಗೆ ನಿಜಕ್ಕೂ ಆನಂದ ನೀಡುತ್ತದೆ ಎಂದಿರುವ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ, ಈ ತಂಡದಲ್ಲಿ ನಾಯಕತ್ವ ನಿರ್ವಹಿಸುವುದು ನನಗೆ ಹೆಚ್ಚಿನ ಅನುಭವ ನೀಡುತ್ತಿದೆ ಎಂದಿದ್ದಾರೆ.
ನನಗೆ ನಾಯಕತ್ವದ ಜವಾಬ್ದಾರಿ ನೀಡಿದ್ದ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 93ರನ್ಗಳಿಕೆ ಮಾಡಿದ್ದು, ಇವತ್ತು ಸ್ಮರಣೀ ಯವಾಗಿದೆ ಎಂದಿದ್ದಾರೆ. ಇಡೀ ದೇಶವನ್ನೇ ಲಾಕ್ಡೌನ್ ಮಾಡಿ ಆದೇಶ ಹೊರಹಾಕಿದಾಗಿನಿಂದಲೂ ಶ್ರೇಯಸ್ ಅಯ್ಯರ್ ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಇದೇ ವೇಳೆ ಸುದ್ದಿವಾಹಿನಿ ಜತೆ ಮನೆಯಿಂದಲೇ ತಮ್ಮ ಮನದಾಳ ಹೊರಹಾಕಿದ್ದಾರೆ.
ಮಹಿಳಾ ಕ್ರಿಕೆಟ್ ತಂಡದ ಜೆಮಿಮಾ ರೊಡ್ರಿಗಸ್ ಕೂಡ ತಮ್ಮ ನೆಚ್ಚಿನ ಮಹಿಳಾ ಕ್ರಿಕೆಟರ್ ಎಂದು ಶ್ರೇಯಸ್ ಹೇಳಿದ್ದಾರೆ. 25 ವರ್ಷದ ಈ ಪ್ಲೇಯರ್ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 103ರನ್ಗಳಿಕೆ ಮಾಡಿ ಮಿಂಚಿದ್ದರು. ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದ್ದರೂ, ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿ ತಮ್ಮ ಸ್ಥಾನ ಗಟ್ಟಿಗೊಳಿಸಿಕೊಂಡಿದ್ದಾರೆ.