ರಾಜ್ಕೋಟ್: ಮೊದಲ ಟಿ20ಯಲ್ಲಿ ಬಾಂಗ್ಲಾದೇಶದ ವಿರುದ್ಧ ಸೋಲನುಭವಿಸಿದ್ದ ಭಾರತ ತಂಡ ಎರಡನೇ ಪಂದ್ಯವನ್ನು ಗೆಲ್ಲಲೇಬೇಕೆಂಬ ಛಲದಿಂದ ಅಭ್ಯಾಸ ನಡೆಸುತ್ತಿದೆ. ಈ ವೇಳೆ ಫಿಟ್ನೆಸ್ ಕಡೆಗೂ ಗಮನ ನೀಡಿದ್ದು, ಜಿಮ್ನಲ್ಲಿ ಎಲ್ಲಾ ಆಟಗಾರರು ಬೆವರಿಳಿಸುತ್ತಿದ್ದಾರೆ.
ಕ್ರಿಕೆಟ್ನಲ್ಲಿ ಆಟಗಾರರು ಕ್ರಿಕೆಟ್ ಆಟದ ಬಗ್ಗೆ ಎಷ್ಟು ಗಮನ ಹರಿಸುತ್ತಾರೋ ಅದೇ ರೀತಿ ಫಿಟ್ನೆಸ್ ಕಡೆಗೂ ಗಮನ ಹರಿಸುವುದು ಪ್ರಮುಖವಾಗಿರುತ್ತದೆ. ರಾಜ್ಕೋಟ್ನಲ್ಲಿ ಎರಡನೇ ಟಿ20 ಕದನ ನಡೆಯಲಿದ್ದು, ಇದಕ್ಕೂ ಮುನ್ನ ಆಟಗಾರರು ಕೆಲಕಾಲ ಜಿಮ್ನಲ್ಲಿ ಬೆವರಿಳಿಸಿದರು.
- ' class='align-text-top noRightClick twitterSection' data=''>
ಈ ವೇಳೆ ಫಿಟ್ನೆಸ್ ಕೋಚ್ ನಿಕ್ವೆಬ್ ಅವರು ಶ್ರೇಯಸ್ ಅಯ್ಯರ್ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ನಡುವೆ ಬ್ಯಾಟಲ್ ರೋಪ್ ಚಾಲೆಂಜ್ ಸ್ಪರ್ಧೆ ಏರ್ಪಡಿಸಿದ್ದರು. ಇದರಲ್ಲಿ ಅಯ್ಯರ್ ರಾಹುಲ್ರನ್ನು ಮಣಿಸಿ ಜಯಶಾಲಿಯಾದರು.
ಮೊದಲು ಸ್ಪರ್ಧೆಗಿಳಿದ ರಾಹುಲ್ 30 ಸೆಕೆಂಡ್ಗಳಲ್ಲಿ 45 ಬಾರಿ ರೋಪ್ ವೇವ್ಸ್ ಮಾಡಿದರು. ಆದರೆ ಇಷ್ಟೇ ಸಮಯದಲ್ಲಿ 50 ರೋಪ್ ವೇವ್ಸ್ ಮಾಡಿದ ಶ್ರೇಯಸ್ ಜಯ ಶಾಲಿಯಾದರು.