ಹೈದರಾಬಾದ್ : ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿಗೆ ದಿನಗಣನೆ ಶುರುವಾಗಿದೆ. ನವೆಂಬರ್ 27 ರಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ರೆಟ್ರೊ ಸ್ಟೈಲ್ ಜರ್ಸಿಯೊಂದಿಗೆ ಟೀಮ್ ಇಂಡಿಯಾ ಆಟಗಾರರು ಕಣಕ್ಕಿಳಿಯುವುದು ಖಚಿತವಾಗಿದೆ.
-
New jersey, renewed motivation. Ready to go. 🇮🇳 pic.twitter.com/gKG9gS78th
— Shikhar Dhawan (@SDhawan25) November 24, 2020 " class="align-text-top noRightClick twitterSection" data="
">New jersey, renewed motivation. Ready to go. 🇮🇳 pic.twitter.com/gKG9gS78th
— Shikhar Dhawan (@SDhawan25) November 24, 2020New jersey, renewed motivation. Ready to go. 🇮🇳 pic.twitter.com/gKG9gS78th
— Shikhar Dhawan (@SDhawan25) November 24, 2020
ಹೌದು, ಕೆಲ ದಿನಗಳ ಹಿಂದೆ ಟೀಮ್ ಇಂಡಿಯಾದ ಜೆರ್ಸಿ ಬದಲಾಗಲಿದೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಅದು ಕೂಡ 1992 ರ ವಿಶ್ವಕಪ್ ವೇಳೆ ಭಾರತದ ಆಟಗಾರರು ಧರಿಸಿದ್ದ ಜರ್ಸಿಯ ಸ್ಟೈಲ್ನಲ್ಲಿಯೆ ಈ ಜರ್ಸಿ ತಯಾರಾಗಿದ್ದು, ಈ ಜರ್ಸಿಯಲ್ಲಿಯೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಭಾರತ ತಂಡದ ಹೊಸ ಜರ್ಸಿಯನ್ನು ಟೀಮ್ ಇಂಡಿಯಾ ಆರಂಭಿಕ ಆಟಗಾರ ಗಬ್ಬರ್ ಸಿಂಗ್ ಖಾತಿಯ ಶಿಖರ್ ಧವನ್ ಬಹಿರಂಗಪಡಿಸಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಹೊಸ ಜರ್ಸಿ ಧರಿಸಿದ ಫೋಟೋ ಹಂಚಿಕೊಂಡಿರುವ ಧವನ್, ಹೊಸ ಜರ್ಸಿ, ಹೊಸ ಪ್ರೇರಣೆ, ಮುನ್ನುಗ್ಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.
ಓದಿ:ಐಸಿಸಿ ನೂತನ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಆಯ್ಕೆ
ಟೀಮ್ ಇಂಡಿಯಾದ ನೂತನ ಜರ್ಸಿ 1992ರ ವಿಶ್ವಕಪ್ ಜರ್ಸಿಯ ವಿನ್ಯಾಸವನ್ನು ಹೊಂದಿದೆ. ಈ ವಿಶ್ವಕಪ್ನಲ್ಲಿ ಎಲ್ಲ ಕ್ರಿಕೆಟ್ ತಂಡಗಳು ಒಂದೇ ವಿನ್ಯಾಸದ ವಿವಿಧ ಬಣ್ಣಗಳ ಜರ್ಸಿ ಧರಿಸಿದ್ದವು. ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್ ತೊಟ್ಟಿದ್ದ ಕಡು ನೀಲಿ ಬಣ್ಣದ ಜರ್ಸಿ ಲುಕ್ನಲ್ಲಿ ಇದೀಗ ವಿರಾಟ್ ಪಡೆ ಮಿಂಚಲು ರೇಡಿಯಾಗಿದೆ. ಇನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡವೂ ನೂತನ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ.