ETV Bharat / sports

ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವ ಪಾಕಿಸ್ತಾನದ ಹಿಂದೂಗಳಿಗೆ ನೆರವಾದ ಕ್ರಿಕೆಟಿಗ ಅಫ್ರಿದಿ

ಕೊರೊನಾದಿಂದ ಸಂಕಷ್ಟಕ್ಕೊಳಗಾದವರಿಗೆ ಕ್ರಿಕೆಟಿಗರು ಹಲವು ರೀತಿಯಲ್ಲಿ ನೆರವಿಗೆ ನಿಂತಿದ್ದಾರೆ. ಇದೀಗ ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್​ ಅಫ್ರಿದಿ ಹಿಂದೂಗಳಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶಾಹಿದ್​ ಅಫ್ರಿದಿ ಫೌಂಡೇಶನ್​
ಶಾಹಿದ್​ ಅಫ್ರಿದಿ ಫೌಂಡೇಶನ್​
author img

By

Published : May 14, 2020, 4:36 PM IST

ಕರಾಚಿ​: ಕೊರೊನಾ ವೈರಸ್​ ವಿಶ್ವದಾದ್ಯಂತ ರೌದ್ರ ನರ್ತನ ತೋರುತ್ತಿದೆ. ಇದರಿಂದ ಸಾವಿರಾರು ಕಾರ್ಮಿಕರು ಹಾಗೂ ಬಡ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೊರೊನಾದಿಂದ ಸಂಕಷ್ಟಕ್ಕೊಳಗಾದವರಿಗೆ ಕ್ರಿಕೆಟಿಗರು ಹಲವ ರೀತಿಯಲ್ಲಿ ನೆರವಿಗೆ ನಿಂತಿದ್ದಾರೆ. ಇದೀಗ ಪಾಕಿಸ್ತಾನದ ಕ್ರಿಕೆಟಿಗ ಶಾಹೀದ್​ ಅಫ್ರಿದಿ ಹಿಂದೂಗಳಿಗೆ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಲಾಕ್​ಡೌನ್​ ಸಂಕಷ್ಟದಲ್ಲಿರುವ ಜನರಿಗೆ ದಿನಸಿ ಸೇರಿದಂತೆ ಅಗತ್ಯವಸ್ತುಗಳನ್ನು ಶಾಹಿದ್​ ಅಫ್ರಿದಿ ಪೌಂಡೇಶನ್​ ಮೂಲಕ ವ್ಯವಸ್ಥೆ ಮಾಡಿದ್ದಾರೆ.

ಶಾಹಿದ್​ ಅಫ್ರಿದಿ ಪೌಂಡೇಶನ್​ ನೆರವಿನಿಂದ 2,200 ಕುಟುಂಬಕ್ಕೆ ಆಹಾರ ಸಾಮಗ್ರಿಯನ್ನು ಒದಗಿಸಿಕೊಟ್ಟಿದ್ದಾರೆ. ಇನ್ನು ಕರಾಚಿಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರಕ್ಕೆ ಆಹಾರ ಸಾಮಗ್ರಿಗಳನ್ನು ದೇಣಿಗೆ ನೀಡಿದ್ದಾರೆ. ಇದನ್ನು ಅಫ್ರಿದಿ ಟ್ವೀಟ್​ ಮೂಲಕ ತಿಳಿಸಿದ್ದು, ಎಲ್ಲರೂ ಒಟ್ಟಿಗೆ ಸಾಮರಸ್ಯದಿಂದ ಬಾಳೋಣ ಎಂದು ಕರೆ ನೀಡಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ನಮ್ಮ ಸಹಾಯಕ್ಕೆ ಧಾವಿಸಿರುವ ಅಫ್ರಿದಿಯವರ ಮಾನವೀಯ ಕಾರ್ಯಕ್ಕೆ ನಾವು ಧನ್ಯವಾದ ತಿಳುಹಿಸುತ್ತೇವೆ. ಅಲ್ಲದೇ ಯಾವುದೇ ಧರ್ಮ, ಜಾತಿ ಹಾಗೂ ವರ್ಗವನ್ನು ಲೆಕ್ಕಿಸದೇ ಸಹಾಯ ಮಾಡುತ್ತಿರುವ ಅಫ್ರಿದಿ ಫೌಂಡೇಶನ್​ಗೆ ಅಖಿಲಾ ಕರಾಚಿವಾರಿ ಹಿಂದೂ ಪಂಚಾಯಿತ್​ ಪತ್ರದ ಮೂಲಕ ಧನ್ಯವಾದ ಸಮರ್ಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.