ದುಬೈ: ಭಾರತದ ಯುವ ಬ್ಯಾಟರ್ ಶೆಫಾಲಿ ವರ್ಮಾ ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ನೂತನ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡು 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
744 ಅಂಕಗಳನ್ನು ಹೊಂದಿರುವ ಶೆಫಾಲಿ 2ನೇ ಸ್ಥಾನದಲ್ಲಿದ್ದರೆ, ಇವರಿಗಿಂತ 4 ಅಂಕ ಹೆಚ್ಚು ಹೊಂದಿರುವ ಆಸ್ಟ್ರೇಲಿಯಾದ ಬೆತ್ ಮೂನಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮತ್ತೊಬ್ಬ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ 693 ಅಂಕ ಹೊಂದಿದ್ದು 7ನೇ ಸ್ಥಾನದಲ್ಲಿದ್ದಾರೆ. ಜಮೀಮಾ ರೋಡ್ರಿಗಸ್(9) ಟಾಪ್ 10 ರಲ್ಲಿರುವ ಮತ್ತೊಬ್ಬ ಭಾರತೀಯರಾಗಿದ್ದಾರೆ.
-
New Zealand skipper Sophie Devine moves up one spot to No.3 in the weekly @MRFWorldwide ICC Women's T20I Rankings update for batting after the #NZvENG series.
— ICC (@ICC) March 9, 2021 " class="align-text-top noRightClick twitterSection" data="
Full list: https://t.co/3ONAIO7dVQ pic.twitter.com/n3hlIjBuOU
">New Zealand skipper Sophie Devine moves up one spot to No.3 in the weekly @MRFWorldwide ICC Women's T20I Rankings update for batting after the #NZvENG series.
— ICC (@ICC) March 9, 2021
Full list: https://t.co/3ONAIO7dVQ pic.twitter.com/n3hlIjBuOUNew Zealand skipper Sophie Devine moves up one spot to No.3 in the weekly @MRFWorldwide ICC Women's T20I Rankings update for batting after the #NZvENG series.
— ICC (@ICC) March 9, 2021
Full list: https://t.co/3ONAIO7dVQ pic.twitter.com/n3hlIjBuOU
ಉಳಿದಂತೆ ಕಿವೀಸ್ ನಾಯಕಿ ಸೋಫಿ ಡಿವೈನ್, ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಮತ್ತು ಅಲಿಸಾ ಹೀಲಿ ಒಂದು ಸ್ಥಾನ ಮೇಲೇರಿ ಕ್ರಮವಾಗಿ 3,4,5 ನೇ ಸ್ಥಾನದಲ್ಲಿದ್ದಾರೆ.
ದೀಪ್ತಿ ಶರ್ಮಾ(6), ರಾಧಾ ಯಾದವ್(8) ಪೂನಮ್ ಯಾದವ್(9) ಬೌಲಿಂಗ್ ವಿಭಾಗದಲ್ಲಿ ಅಗ್ರ 10ರಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಸೋಫಿ ಎಕ್ಲನ್ಸ್ಟನ್ ಮೊದಲ ಸ್ಥಾನದಲ್ಲಿದೆ, ಆಸ್ಟ್ರೇಲಿಯಾದ ಮೇಗನ್ ಶೂಟ್ ಮತ್ತು ಜೆಸ್ ಜೊನಾಸೆನ್ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಮಂದಾನ ಸ್ಫೋಟಕ ಅರ್ಧಶತಕ: ದ.ಆಫ್ರಿಕಾ ವನಿತೆಯ ವಿರುದ್ಧ ಭಾರತಕ್ಕೆ ಜಯ