ಮ್ಯಾಂಚೆಸ್ಟರ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ತಂಡ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿದೆ.
ಮಳೆಯಾಗಿದ್ದರಿಂದ ಪಂದ್ಯವು ಸುಮಾರು ಒಂದೂವರೆ ಗಂಟೆ ತಡವಾಗಿ ಆರಂಭಗೊಂಡಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಆಂಗ್ಲರು 82 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿದ್ದಾರೆ. ಆರಂಭದಲ್ಲೇ 29 ರನ್ಗೆ ಎರಡು ವಿಕೆಟ್ ಕಳೆದುಕೊಂಡರೂ ಕೂಡ ಆರಂಭಿಕ ಆಟಗಾರ ಡೊಮಿನಿಕ್ ಸಿಬ್ಲಿ (86*) ಹಾಗೂ ಆಲ್ರೌಂಡರ್ ಬೆನ್ ಸ್ಟೋಕ್ಸ್ (59*) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಉತ್ತಮ ಸ್ಥಿತಿಯಲ್ಲಿದೆ.
-
304 balls
— England Cricket (@englandcricket) July 16, 2020 " class="align-text-top noRightClick twitterSection" data="
126 runs
A proper graft from these two today 🤜🤛 pic.twitter.com/NLkUrh4bNb
">304 balls
— England Cricket (@englandcricket) July 16, 2020
126 runs
A proper graft from these two today 🤜🤛 pic.twitter.com/NLkUrh4bNb304 balls
— England Cricket (@englandcricket) July 16, 2020
126 runs
A proper graft from these two today 🤜🤛 pic.twitter.com/NLkUrh4bNb
ಆರಂಭಿಕ ಆಟಗಾರ ರೊರಿ ಬರ್ನ್ಸ್ (15) ಸ್ಪಿನ್ನರ್ ರೋಸ್ಟನ್ ಚೇಸ್ಗೆ ಮೊದಲ ಬಲಿಯಾದರೆ, ನಂತರ ಕ್ರೀಸ್ಗೆ ಬಂದ ಜಾಕ್ ಕ್ರಾವ್ಲಿ ಕೂಡ ಖಾತೆ ತೆರೆಯದೆ ತಾವೆದುರಿಸಿದ ಮೊದಲ ಎಸೆತದಲ್ಲೇ ಔಟ್ ಆದರು. ಹೀಗಾಗಿ ಇಂಗ್ಲೆಂಡ್ 29 ರನ್ಗೆ ಎರಡು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಡೊಮಿನಿಕ್ ಸಿಬ್ಲಿ (86*) ಜೊತೆ ಸೇರಿಕೊಂಡ ನಾಯಕ ಜೋ ರೂಟ್ (23) ಮೂರನೇ ವಿಕೆಟ್ಗೆ 52 ರನ್ ಸೇರಿಸಿ ತಂಡಕ್ಕೆ ನೆರವಾದರು. ಈ ವೇಳೆ ರೂಟ್ ಅಲ್ಜಾರಿ ಜೋಸೆಫ್ ಬೌಲಿಂಗ್ನಲ್ಲಿ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಬಳಿಕ ಒಂದಾದ ಆಲ್ರೌಂಡರ್ ಬೆನ್ ಸ್ಟೋಕ್ಸ್ (59*) ಹಾಗೂ ಡೊಮಿನಿಕ್ ನಾಲ್ಕನೇ ವಿಕೆಟ್ಗೆ 126 ರನ್ ಸೇರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವಿಂಡೀಸ್ ಪರ ಸ್ಪಿನ್ನರ್ ರೋಸ್ಟನ್ ಚೇಸ್ 2 ಹಾಗೂ ಅಲ್ಜಾರಿ ಜೋಸೆಫ್ ಒಂದು ವಿಕೆಟ್ ಪಡೆದಿದ್ದಾರೆ. ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗೆದ್ದಿರುವ ಕೆರಿಬಿಯನ್ನರು ಸರಣಿ ಗೆಲುವಿನ ವಿಶ್ವಾಸದಲ್ಲಿದ್ದರೆ, ಆಂಗ್ಲರು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ.