ಲಾಹೋರ್: ಭಾರತ ತಂಡ 2006ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ವೇಳೆ ಸಚಿನ್ ತೆಂಡೂಲ್ಕರ್ ಅವರು ಪಾಕ್ ವೇಗಿ ಅಖ್ತರ್ ಬೌನ್ಸರ್ಗೆ ಬ್ಯಾಟಿಂಗ್ ನಡೆಸಲು ತಿಣುಕಾಡುತ್ತಿದ್ದರು ಎಂದು ಹೇಳುವ ಮೂಲಕ ಮೊಹಮ್ಮದ್ ಆಸಿಫ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಮೊದಲ ಎರಡು ಟೆಸ್ಟ್ ಪಂದ್ಯಗಳು ಗರಿಷ್ಠ ಮೊತ್ತ ದಾಖಲಿಸಿ ಡ್ರಾನಲ್ಲಿ ಅಂತ್ಯಗೊಂಡಿದ್ದವು. ಆದ್ದರಿಂದ ಮೂರು ಪಂದ್ಯಗಳ ಸರಣಿಯಲ್ಲಿ ಕೊನೆಯ ಪಂದ್ಯ ರೋಚಕತೆಯಿಂದ ಕೂಡಿತ್ತು. ಅದೇ ಪಂದ್ಯದಲ್ಲಿ ಭಾರತದ ಇರ್ಫಾನ್ ಪಠಾಣ್ ಕೂಡ ಹ್ಯಾಟ್ರಿಕ್ ಪಡೆದಿದ್ದರು.
ಭಾರತ ತಂಡ 2006ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದನ್ನು ನೀವು ನೆನೆಪಿಸಿಕೊಳ್ಳಿ. ಭಾರತ ತಂಡ ಅದ್ಭತ ಬ್ಯಾಟಿಂಗ್ ಲೈನ್ ಅಪ್ ಹೊಂದಿತ್ತು. ದ್ರಾವಿಡ್ ಸಾಕಷ್ಟು ರನ್ ಗಳಿಸಿದ್ದರು. ಸೆಹ್ವಾಗ್ ಮುಲ್ತಾನ್ ಟೆಸ್ಟ್ನಲ್ಲಿ ತ್ರಿಶತಕ ಬಾರಿಸಿದ್ದರು. ಫೈಸಲಾಬಾದ್ ಟೆಸ್ಟ್ನಲ್ಲಿ ಎರಡು ತಂಡಗಳು 600 ರನ್ ಗಳಿಸಿದ್ದವು. ಎಂ.ಎಸ್.ಧೋನಿ 7 ಅಥವಾ 8ನೇ ಕ್ರಮಾಂಕಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದರು. ಸರಣಿಗೂ ಮುನ್ನ ನಾವು ಅವರ ಬ್ಯಾಟಿಂಗ್ ಲೈನ್ ಅಪ್ ನೋಡಿ ಚಿಂತೆಗೀಡಾಗಿದ್ದೆವು ಎಂದು 2010ರಲ್ಲಿ ಮ್ಯಾಚ್ ಫಿಕ್ಸಿಂಗ್ನಲ್ಲಿ ಸಿಲುಕಿ 7 ವರ್ಷ ಪಿಸಿಬಿಯಿಂದ ಬ್ಯಾನ್ ಆಗಿರುವ ಆಸಿಫ್ ಹೇಳಿದ್ದಾರೆ.
ಮೂರನೇ ಪಂದ್ಯದಲ್ಲಿ ಇರ್ಫಾನ್ ಪಠಾಣ್ರ ಹ್ಯಾಟ್ರಿಕ್ ಹೊರತಾಗಿಯೂ ಭಾರತ ಆ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿತ್ತು. ನಾವು ಮೊದಲ ಇನ್ನಿಂಗ್ಸ್ನಲ್ಲಿ 240 ರನ್ಗಳಿಗೆ ಆಲೌಟ್ ಆಗಿದ್ದೆವು. ಆದರೆ ನಾವು ಬೌಲಿಂಗ್ ಸ್ಟಾರ್ಟ್ ಮಾಡಿದಂತಹ ಸಂದರ್ಭದಲ್ಲಿ ಶೋಯೆಬ್ ಅಖ್ತರ್ ತಮ್ಮ ಎಕ್ಸ್ಪ್ರೆಸ್ ವೇಗದ ಬೌಲಿಂಗ್ ಮೂಲಕ ಭಾರತೀಯರ ವಿರುದ್ಧ ಚಮತ್ಕಾರ ಮಾಡಿದ್ದರು. ನಾನು ಸ್ಕ್ವೇರ್ ಲೆಗ್ನಲ್ಲಿ ಫೀಲ್ಡಿಂಗ್ ನಡೆಸಯತ್ತಿದ್ದೆ. ಆ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ಸಚಿನ್ ತೆಂಡೂಲ್ಕರ್ ಅಖ್ತರ್ ಬೌನ್ಸರ್ ಎದುರಿಸಲಾಗದೆ ಕಣ್ಣುಮುಚ್ಚಿ ಬ್ಯಾಟಿಂಗ್ ನಡೆಸುತ್ತಿದ್ದರು. ಭಾರತೀಯ ಬ್ಯಾಟ್ಸ್ಮನ್ಗಳ ರನ್ ಗಳಿಸಲಾಗದೆ ಹಿಂದಿನ ಪಾದದ ಮೂಲಕ ಬ್ಯಾಟಿಂಗ್ ನಡೆಸುತ್ತಿದ್ದರು. ನಾವು 240 ರನ್ಗಳನ್ನು ಮೀರಲು ಅವಕಾಶ ನೀಡಲಿಲ್ಲ. ಕೊನೆಗೆ ನಾವು ಜಯದೊಂದಿಗೆ ಪಂದ್ಯವನ್ನು ಮುಗಿಸಿದ್ದೆವು ಎಂದು ಹೇಳಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ 245 ರನ್ಗಳಿಗೆ ಆಲೌಟ್ ಆದರೆ, ಇದಕ್ಕುತ್ತರವಾಗಿ ಭಾರತ 238 ರನ್ ಗಳಿಸಿತ್ತು. 2ನೇ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ 599 ರನ್ ಗಳಿಸಿ 341 ರನ್ಗಳ ಬೃಹತ್ ಜಯ ಸಾಧಿಸಿತ್ತು.