ETV Bharat / sports

ರಣಜಿ ಟ್ರೊಫಿ : ಮತ್ತೊಮ್ಮೆ ಅಬ್ಬರಿಸಿದ ಸರ್ಫರಾಜ್ ಖಾನ್ ದ್ವಿಶತಕದತ್ತ ದಾಪುಗಾಲು.. - ಸರ್ಫರಾಜ್ ಖಾನ್ ಅಬ್ಬರ

ಒಂದು ಹಂತದಲ್ಲಿ ಮುಂಬೈ ತಂಡ 72 ರನ್​ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಸರ್ಫರಾಜ್ ಮತ್ತು ಆಕರ್ಷಿತ್‌ ಗೊಮೆಲ್ ತಂಡಕ್ಕೆ ಆಸರೆಯಾದರು. ನಾಲ್ಕನೇ ವಿಕೆಟ್​ಗೆ 275 ರನ್​ಗಳ ಜೊತೆಯಾಟವಾಡಿದ್ರು.

Sarfaraz Khan's sparkling form continue,ಸರ್ಫರಾಜ್ ಖಾನ್
ಸರ್ಫರಾಜ್ ಖಾನ್
author img

By

Published : Feb 12, 2020, 11:29 PM IST

ಮುಂಬೈ: ಮಧ್ಯ ಪ್ರದೇಶದ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಗ್ರೂಪ್ ಹಂತದ ಪಂದ್ಯದ ಮೊದಲ ದಿನದಂದು ವಾಂಖೆಡೆ ಮೈದಾನದಲ್ಲಿ 169 ರನ್ ಗಳಿಸುವ ಮೂಲಕ ಮುಂಬೈನ ಯುವ ಆಟಗಾರ ಸರ್ಫರಾಜ್ ಖಾನ್ ಮತ್ತೊಮ್ಮೆ ಅಬ್ಬರಿಸಿದ್ದಾರೆ.

ಒಂದು ಹಂತದಲ್ಲಿ ಮುಂಬೈ ತಂಡ 72 ರನ್​ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಸರ್ಫರಾಜ್ ಮತ್ತು ಆಕರ್ಷಿತ್‌ ಗೊಮೆಲ್ ತಂಡಕ್ಕೆ ಆಸರೆಯಾದರು. ನಾಲ್ಕನೇ ವಿಕೆಟ್​ಗೆ 275 ರನ್​ಗಳ ಜೊತೆಯಾಟವಾಡಿದ್ರು.

Sarfaraz Khan's sparkling form continue,ಸರ್ಫರಾಜ್ ಖಾನ್
2019-2020 ರಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿ

ಗೊಮೆಲ್ 122 ರನ್‌ಗಳಿಗೆ ಔಟಾದರೆ, ಸರ್ಫರಾಜ್ 169 ರನ್​ಗಳಿಸಿ ಅಜೇಯರಾಗುಳಿದಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಮುಂಬೈ ತಂಡ 4 ವಿಕೆಟ್ ಕಳೆದುಕೊಂಡು 352 ರನ್​ ಗಳಿಸಿದೆ.

ಇದೇ ಋತುವಿನಲ್ಲಿ ಒಂದು ತ್ರಿಶತಕ ಮತ್ತು ದ್ವಿಶತಕ ಗಳಿಸಿರುವ ಸರ್ಫರಾಜ್ ಖಾನ್ ಮತ್ತೊಮ್ಮೆ ದ್ವಿಶತಕದತ್ತ ದಾಪುಗಾಲು ಹಾಕುತ್ತಿದ್ದಾರೆ. ಟೂರ್ನಿಯಲ್ಲಿ ಈವರೆಗೆ 6 ಪಂದ್ಯಗಳಿಂದ 914ರನ್ ಗಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.