ಆಲೂರು: ರಾಷ್ಟ್ರೀಯ ತಂಡದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಸಂಜು ಸಾಮ್ಸನ್ ವಿಜಯ ಹಜಾರೆ ಟ್ರೋಫಿಯಲ್ಲಿ ವೇಗದ ದ್ವಿಶತಕ ಸಿಡಿಸಿದ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಗೋವಾ ವಿರುದ್ಧ ಕರ್ನಾಟಕದ ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಜು ಕೇವಲ 125 ಎಸೆತಗಳಲ್ಲಿ ದ್ವಿಶತಕ ಸಿಡಿಸಿದರು. ಈ ಮೂಲಕ 50 ಓವರ್ಗಳ ಪಂದ್ಯದಲ್ಲಿ ವೇಗದ ದ್ವಿಶತಕ ಸಿಡಿಸಿದ ಭಾರತೀಯ ಹಾಗೂ ವಿಜಯ್ ಹಜಾರೆ ಕ್ರಿಕೆಟ್ನಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
ಈ ಹಿಂದೆ ಭಾರತ ತಂಡದ ಶಿಖರ್ ಧವನ್ (248) ದಕ್ಷಿಣ ಆಫ್ರಿಕಾ ಎ ವಿರುದ್ಧ 132 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದರು. ಇನ್ನು ಅಂತಾರಾಷ್ಟ್ರೀಯ ಮೊದಲ ದ್ವಿಶತಕ ಸಿಡಿಸಿದ ಸಚಿನ್ 147 ಎಸೆತ ತೆಗೆದುಕೊಂಡರೆ, ಸೆಹ್ವಾಗ್ 140, ರೋಹಿತ್ ಎರಡು ಬಾರಿ 151 ಮತ್ತೊಂದಕ್ಕೆ 157 ಎಸೆತ ತೆಗೆದುಕೊಂಡಿದ್ದಾರೆ.
50 ಓವರ್ಗಳ ಪಂದ್ಯದಲ್ಲಿ ನೋಡುವುದಾದರೆ ಆಸ್ಟ್ರೇಲಿಯಾದ ಟ್ರೇವಿಸ್ ಹೆಡ್ ಸೌತ್ ಆಸ್ಟ್ರೇಲಿಯಾ ಪರ ಕೇವಲ 117 ಎಸೆತಗಳಲ್ಲಿ ದ್ವಿಶಕ ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ನ ಆಲಿ ಬ್ರೌನ್ ಸರ್ರೆ ತಂಡದ ಪರ 118 ಎಸೆತಗಳಲ್ಲಿ ಇದೀಗ ಸಂಜು ಸಾಮ್ಸನ್ ಲಿಸ್ಟ್ ಎ ಕ್ರಿಕೆಟ್ನಲ್ಲಿ ವೇಗವಾಗಿ ದ್ವಿಶತಕ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.