ತಿರುವನಂತಪುರಂ: ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಸಂಜು ಸಾಮ್ಸನ್ ಆ ಪಂದ್ಯಗಳ ಸಂಭಾವನೆಯನ್ನು ಕ್ರೀಡಾಂಗಣ ಸಿಬ್ಬಂದಿಗಳಿಗೆ ನೀಡಿದ್ದಾರೆ.
ತಿರುವನಂತಪುರಂನಲ್ಲಿ ನಡೆದ 5 ಏಕದಿನ ಪಂದ್ಯಗಳ ಸರಣಿಯನ್ನು ಭಾರತ ತಂಡ 4-1ರಲ್ಲಿ ಜಯಿಸಿತ್ತು. ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿಸಿದ್ದ ಭಾರತ ತಂಡ ಸಾಮ್ಸನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ (91) 20 ಓವರ್ಗಳಲ್ಲಿ 204 ರನ್ಗಳಿಸಿತ್ತು.
ಸರಣಿಯ ಎಲ್ಲಾ ಪಂದ್ಯಗಳು ಮಳೆಗೆ ತುತ್ತಾಗಿದ್ದವು. ಆದರೆ ಎಲ್ಲಾ ಪಂದ್ಯಗಳಲ್ಲೂ ಓವರ್ಗಳನ್ನು ಕಡಿತಗೊಳಿಸಿತ್ತೇ ವಿನಃ ರದ್ದಾಗಿರಲಿಲ್ಲ. ಇದರಿಂದ ಮಳೆಯಿಂದ ಮೈದಾನ ಒದ್ದೆಯಾಗದಂತಿರಲು ನೋಡಿಕೊಂಡ ಸಿಬ್ಬಂದಿಗಳಿಗೆ ತಮ್ಮ 2 ಪಂದ್ಯಗಳ ಸಂಭಾವನೆಯನ್ನು ನೀಡಲು ಸಂಜು ತೀರ್ಮಾನಿಸಿದ್ದಾರೆ.
ಸ್ವತಃ ಕೇರಳದವರಾದ ಸಂಜು ಕ್ರೀಡಾಂಗಣ ನಿರ್ವಹಣಾ ಸಿಬಂದಿಗಳು ಶ್ರಮಕ್ಕೆ ಮೆಚ್ಚಿ ಅವರ ಎರಡು ಪಂದ್ಯಗಳ ಸಂಭಾವನೆ 1.50 ಲಕ್ಷ ರೂ. ಮೊತ್ತವನ್ನು ಅಲ್ಲಿನ ಸಿಬಂದಿಗಳಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರ ಈ ನಿರ್ಧಾರಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.