ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಮಗ ಹಾಗೂ ಭಾರತ ಟೆನ್ನಿಸ್ ಸ್ಟಾರ್ ಸಾನಿಯ ಮಿರ್ಜಾ ಅವರ ತಂಗಿ ವಿವಾಹ ಬಂಧನಕ್ಕೆ ಕಾಲಿಡುತ್ತಿದ್ದಾರೆ.
ಸಾನಿಯಾ ಮಿರ್ಜಾ ಅವರ ತಂಗಿ ಅನಮ್ ಮಿರ್ಜಾ ಹಾಗೂ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮಗ ಅಸದ್ ಅಜರುದ್ಧೀನ್ ಈ ವರ್ಷದ ಡಿಸೆಂಬರ್ನಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂದು ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಸಾನಿಯಾ ಮಿರ್ಜಾ ತಿಳಿಸಿದ್ದಾರೆ.
ಅನಮ್ ಮುದ್ದಾದ ಹುಡುಗನನ್ನು ಮದುವೆಯಾಗಲಿದ್ದಾಳೆ. ಆತನ ಹೆಸರು ಅಸದ್, ಅವರು ಅಜರುದ್ದೀನ್ ಅವರ ಮಗ ಎಂಬುದನ್ನು ತಿಳಿಸಲು ನಿಜವಾಗಿಯೂ ಉತ್ಸುಕರಾಗಿದ್ದೇವೆ ಎಂದು ಬರೆದು ಕೊಂಡಿದ್ದಾರೆ.
- " class="align-text-top noRightClick twitterSection" data="
">
2015ರಲ್ಲಿ ಹೈದರಾಬಾದಿನ ಬ್ಯೂಸಿನೆಸ್ಮೆನ್ ಅಕ್ಬರ್ ಎಂಬುವವರನ್ನು ಅನಮ್ ಮದುವೆಯಾಗಿದ್ದರು. ಇದೀಗ ಅವರಿಂದ ಬೇರ್ಪಟ್ಟಿದ್ದು, ಅಸದ್ ಜೊತೆ ಸುತ್ತಾಡಿ ಹಲವು ಗಾಸಿಪ್ಗೆ ತುತ್ತಾಗಿದ್ದರು. ಇದೀಗ ಆ ಗಾಸಿಪ್ಗೆ ಸಾನಿಯಾ ತೆರೆ ಎಳೆದಿದ್ದಾರೆ.
- " class="align-text-top noRightClick twitterSection" data="
">