ETV Bharat / sports

ಸಚಿನ್​ ಶತಕಗಳ ಶತಕದ ದಾಖಲೆ ಮುರಿಯೋದು__ ಆಸೀಸ್‌ ಮಾಜಿ ಸ್ಪಿನ್ನರ್​ ಭವಿಷ್ಯ - Virat Kohli broke sachin's 100 centuries record

ಈ ದಿನಗಳಲ್ಲಿ ಹೆಚ್ಚಿನ ಕ್ರಿಕೆಟ್​ ಪಂದ್ಯಗಳನ್ನು ಆಯೋಜಿಸುವುದರಿಂದ ಕೊಹ್ಲಿ ಸಹಜವಾಗಿಯೇ ಸಚಿನ್​ರ ಮಹತ್ವದ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಹಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ..

Sachin's record of 100 centuries
ಸಚಿನ್​ ನೂರು ಶತಕಗಳ ದಾಖಲೆ
author img

By

Published : Jul 5, 2020, 6:48 PM IST

ನವದೆಹಲಿ : ಸಚಿನ್ ತೆಂಡೂಲ್ಕರ್​ ಅವರ ಶತಕಗಳ ಶತಕದ ದಾಖಲೆಯನ್ನು ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಬ್ರೇಕ್​ ಮಾಡಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್​ ಬ್ರಾಡ್​ ಹಾಗ್​ ಭವಿಷ್ಯ ನುಡಿದಿದ್ದಾರೆ.

ಸಚಿನ್​ ತಂಡೂಲ್ಕರ್​ ತಮ್ಮ 22 ವರ್ಷಗಳ ವೃತ್ತಿ ಜೀವನದಲ್ಲಿ 51 ಟೆಸ್ಟ್ ಹಾಗೂ 49 ಏಕದಿನ ಶತಕಗಳನ್ನು ಸಿಡಿಸಿದ್ದಾರೆ. ವಿರಾಟ್​ ಕೊಹ್ಲಿ ಪ್ರಸ್ತುತ 70 ಶತಕ ಸಿಡಿಸಿದ್ದು, ಹೆಚ್ಚು ಶತಕ ಸಿಡಿಸಿರುವ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. (43 ಏಕದಿನ+27 ಟೆಸ್ಟ್​)​

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್​ ಬ್ರಾಡ್​ ಹಾಗ್​

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್​ 71 ಶತಕ ಸಿಡಿಸುವ ಮೂಲಕ ಸಚಿನ್​ ನಂತರದ ಸ್ಥಾನ ಪಡೆದಿದ್ದಾರೆ. ಹಾಗ್ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಲೈವ್​ ಸಂವಾದ ನಡೆಸುವ ವೇಳೆ ಅಭಿಮಾನಿಯೊಬ್ಬ ಕೊಹ್ಲಿ ಸಚಿನ್​ರ ದಾಖಲೆಯನ್ನು ಅಳಿಸಿದ್ರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಖಂಡಿತವಾಗಿಯೂ ಅವರು ಮುರಿಯಲಿದ್ದಾರೆ. ಸಚಿನ್​ ಆಡುತ್ತಿದ್ದಾಗ ಅವರಿದ್ದ ಫಿಟ್​ನೆಸ್​ಗಿಂತ ಕೊಹ್ಲಿ ತುಂಬಾ ಮುಂದಿರುವುದರಿಂದ ಆ ದಾಖಲೆ ಮುರಿಯಲು ಸಾಧ್ಯವಾಗುತ್ತದೆ ಎಂದು ಉತ್ತರಿಸಿದ್ದಾರೆ.

Virat Kohli
ವಿರಾಟ್​ ಕೊಹ್ಲಿ

ಜೊತೆಗೆ ಅವರು(ಭಾರತ) ಗುಣಮಟ್ಟದ ಫಿಟ್​ನೆಸ್​ ತರಬೇತುದಾರರನ್ನು ಹೊಂದಿದ್ದಾರೆ. ಹಾಗೂ ಸಾಕಷ್ಟು ವೈದ್ಯರು, ಫಿಸಿಯೋಗಳನ್ನು ಮಂಡಳಿ ಒದಗಿಸಿಕೊಟ್ಟಿದೆ ಎಂದು ಹೇಳಿದ್ದಾರೆ. ಇದರಿಂದ ಅವರು ಮಿಸ್​ ಮಾಡಿಕೊಳ್ಳುವ ಪಂದ್ಯಗಳ ಸಂಖ್ಯೆ ಕಡಿಮೆಯಿರುತ್ತದೆ. ಜೊತೆಗೆ ಈ ದಿನಗಳಲ್ಲಿ ಹೆಚ್ಚಿನ ಕ್ರಿಕೆಟ್​ ಪಂದ್ಯಗಳನ್ನು ಆಯೋಜಿಸುವುದರಿಂದ ಕೊಹ್ಲಿ ಸಹಜವಾಗಿಯೇ ಸಚಿನ್​ರ ಮಹತ್ವದ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಹಾಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಅಭಿಮಾನಿ ಪ್ರಸ್ತುತ ಯಾವ ತಂಡದ ಬೌಲಿಂಗ್​ ಆಟ್ಯಾಕ್​ ಹೆಚ್ಚು ಬಲಶಾಲಿಯಾಗಿದೆ ಎಂದು ಕೇಳಿದ್ದಕ್ಕೆ ಭಾರತ ತಂಡದ ಬೌಲಿಂಗ್​ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.