ETV Bharat / sports

ಐಸಿಸಿಯಿಂದ 'ಕ್ರಿಕೆಟ್​ ದೇವರಿಗೆ' ಹಾಲ್​ ಆಫ್​ ಫೇಮ್​ ಗೌರವ

ವಿಶ್ವ ಕಂಡ ಶ್ರೇಷ್ಠ ಕ್ರಿಕೆಟ್​ ಅಟಗಾರ ಸಚಿನ್​ ತೆಂಡೂಲ್ಕರ್​ ಅವರನ್ನ ಐಸಿಸಿ ಹಾಲ್​ ಆಫ್​ ಫೇಮ್ ಕ್ಲಬ್​ಗೆ ಸೇರಿಸಿದೆ.

ಕ್ರಿಕೆಟ್​ ದೇವರಿಗೆ ಹಾಲ್​ ಆಫ್​ ಫೇಮ್​ ಗೌರವ!
author img

By

Published : Jul 20, 2019, 11:09 AM IST

ನವದೆಹಲಿ: ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್​ ಅವರಿಗೆ ಐಸಿಸಿ ಹಾಲ್​ ಆಫ್​ ಫೇಮ್​ ಗೌರವ ನೀಡಿದೆ.

ಕ್ರಿಕೆಟ್​ ದೇವರೊಂದಿಗೆ ದಕ್ಷಿಣ ಆಫ್ರಿಕಾ ತಂಡದ ಆಟಗಾರ ಅಲನ್ ಡೊನಾಲ್ಡ್​ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್​ ತಂಡದ ಅಟಗಾರ್ತಿ ಕ್ಯಾಥರಿನ್​ ಫಿಟ್ಜ್​ಪ್ಯಾಟ್ರಿಕ್ ಅವರನ್ನೂ ಹಾಲ್​ ಆಫ್​ ಫೇಮ್​ ಕ್ಲಬ್​ಗೆ ಸೇರಿಸಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಈ ಹಿರಿಮೆಗೆ ಪಾತ್ರವಾದ ಭಾರತ ಕ್ರಿಕೆಟ್​ ತಂಡದ 6ನೇ ಆಟಗಾರರಾಗಿದ್ದಾರೆ.

ಸಚಿನ್‌ಗೂ ಮೊದಲು ಬಿಷನ್ ಸಿಂಗ್​ ಬೇಡಿ(2009), ಕಪಿಲ್ ದೇವ್(2009)​, ಸುನೀಲ್ ಗವಾಸ್ಕರ್(2009) ಅನಿಲ್​ ಕುಂಬ್ಳೆ (2015) ಮತ್ತು ರಾಹುಲ್​ ದ್ರಾವಿಡ್​(2018) ಐಸಿಸಿ ಹಾಲ್​ ಆಫ್​ ಫೇಮ್​ ಕ್ಲಬ್​ ಗೌರವ ದೊರೆತಿತ್ತು.

ಇದೇ ವೇಳೆ ಐಸಿಸಿ ಜೊತೆ ಮಾತನಾಡಿರುವ ಸಚಿನ್, ಪ್ರತಿಯೊಂದು ಪ್ರಶಸ್ತಿಯೂ ಒಬ್ಬ ವ್ಯಕ್ತಿಗೆ ಉತ್ತೇಜನ ನೀಡುತ್ತದೆ. ಮತ್ತಷ್ಟು ಸಾಧಿಸಲು ಸ್ಪೂರ್ತಿ ನೀಡುತ್ತದೆ. ​ನನ್ನನ್ನು ಗುರುತಿಸಿ ಈ ಗೌರವ ನೀಡಿದ್ದಕ್ಕೆ ಐಸಿಸಿಗೆ ಧನ್ಯವಾದಗಳು. ನನಗೆ ನನ್ನ ತಂದೆಯೇ ಹೀರೋ, 2011ರಲ್ಲಿ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದ ಕ್ಷಣ ಅವಿಸ್ಮರಣೀಯವಾದದ್ದು ಎಂದು ಸಂತಸ ವ್ಯಕ್ತಪಡಿಸಿದ್ರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.